ತೋಟ ಬೆಂಗ್ರೆ  ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿ ಒಕ್ಕೂಟದಿಂದ ಇಲಾಖೆಗೆ ಮನವಿ

Spread the love

ತೋಟ ಬೆಂಗ್ರೆ  ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿ ಒಕ್ಕೂಟದಿಂದ ಇಲಾಖೆಗೆ ಮನವಿ

ಮಂಗಳೂರು ನಗರ ವ್ಯಾಪ್ತಿಯ ತೋಟ ಬೆಂಗ್ರೆ ಬೀಚ್ ಗೆ ಆಗಮಿಸಿದ ಜೋಡಿಯ ಮೇಲೆ ಹಲ್ಲೆ ನಡೆಸಿ ಯುವತಿಯನ್ನು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿ ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟ – ಮಂಗಳೂರು ನಗರ ವತಿಯಿಂದ ಪೋಲಿಸ್ ಉಪ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ತಾಜುದ್ದೀನ್,ಮಂಗಳೂರು ನಗರ ಉಪಾಧ್ಯಕ್ಷ ಅಬ್ದುಲ್ ಬಾಸಿತ್ ಹಾಗೂ ವಿದ್ಯಾರ್ಥಿಗಳಾದ ಮುಫೀದ,ರಾಧಾ,ಅನನ್ಯ, ಪ್ರಸಿಲ್ಲಾ,ಅಂಜಲಿ,ಸಫ್ರೀನ,ರಮ್ಯ,ಮತ್ತು ಸುಹೈನಾ ಉಪಸ್ಥಿತರಿದ್ದರು


Spread the love