ತ್ರಿವಳಿ ತಲಾಖ್ ನಿಷೇಧ ಮಾಡಲು ಹೊರಟ ಕೇಂದ್ರ ಸರ್ಕಾರದ ಕ್ರಮ ಖಂಡನೀಯ: ಅಝೀಝ್ ಸಅದಿ.

Spread the love

ತ್ರಿವಳಿ ತಲಾಖ್ ನಿಷೇಧ ಮಾಡಲು ಹೊರಟ ಕೇಂದ್ರ ಸರ್ಕಾರದ ಕ್ರಮ ಖಂಡನೀಯ: ಅಝೀಝ್ ಸಅದಿ.

ಸೌದಿ ಅರೇಬಿಯಾ:  ಕೆ.ಸಿ.ಎಫ್ ಅಲ್ ಹಸ್ಸಾ ವತಿಯಿಂದ ತ್ರಿವಳಿ ತಲಾಖ್ ನಿಷೇಧ ಮತ್ತು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ವಿಚಾರ ಗೋಷ್ಠಿ ಕಾರ್ಯಕ್ರಮ  ಹುಫೂಫ್ ಸಅದಿಯಾ ಹಾಲ್ ನಲ್ಲಿ ಶುಕ್ರವಾರ ನಡೆಯಿತು.

triple-talaq triple-talaq1

ಕಾರ್ಯಕ್ರಮವನ್ನು ಕೆ.ಸಿ.ಎಫ್ ದಮ್ಮಾಮ್ ಝೋನಲ್ ಅಧ್ಯಕ್ಷ ಅಬ್ದುಲ್ ಅಝೀಝ್ ಸಅದಿ ಉದ್ಘಾಟಿಸಿ, ಮಾತನಾಡಿದರು. ಪವಿತ್ರ ಇಸ್ಲಾಮ್ ಧರ್ಮದ ಆದರ್ಶಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಕೇಂದ್ರ ಸರಕಾರದ ಕೋಮುವಾದಿ ಧೋರಣೆಯ ಬಗ್ಗೆ ಖಂಡನೆ ವ್ಯಕ್ತಪಡಿಸಿದರು. ಇದೇ ವೇಳೆ ಕೆ.ಸಿ.ಎಫ್ ನಾಯಕರಾದ ಝಕರಿಯಾ ಸಅದಿ ಮಾತನಾಡಿ

ತ್ವಲಾಖ್ ನ ಬಗೆಗಿನ ವಿವಾದವನ್ನು ಹಿಡಿದು ಮುಸ್ಲಿಂ ಸಮುದಾಯದಲ್ಲಿ ಮೂಗುತೂರಿಸುವ ಕೇಂದ್ರ ಸರ್ಕಾರದ ನಡೆಯು ಖಂಡನೀಯ ಎಂದರು.ಈ ವೇಳೆ ಕೆಸಿಎಫ್ ನಾಯಕರುಗಳಾದ ಸ್ವಾದಿಕ್ ಕಾಟಿಪಳ್ಳ, ಮುಹಮ್ಮದ್ ಮಲೆಬೆಟ್ಟು, ಅಬ್ದುರ್ರಹ್ಮಾನ್ ಕೈರಂಗಳ ಹಾಗೂ ಕೆ.ಸಿ.ಎಫ್ ದಮ್ಮಾಮ್, ಅಲ್ ಹಸ್ಸಾ ಕಾರ್ಯಕರ್ತರು  ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಅಶ್ರು ಬಜ್ಪೆ ನಿರ್ವಹಿಸಿದರು. ಹಾರಿಸ್ ಕಾಜೂರ್ ಸ್ವಾಗತಿಸಿ, ಝಕರೀಯಾ ಸಅದಿ ಧನ್ಯವಾದಗೈದರು.

ವರದಿ: ಹಕೀಂ ಬೋಳಾರ್


Spread the love