ಥಾಣೆ ಮೇಯರ್ ಆಗಿ ಉಡುಪಿ ಮೂಲದ ವಿೂನಾಕ್ಷಿ ರಾಜೇಂದ್ರ ಶಿಂಧೆ ಆಯ್ಕೆ

Spread the love

ಥಾಣೆ ಮೇಯರ್ ಆಗಿ ಉಡುಪಿ ಮೂಲದ ವಿೂನಾಕ್ಷಿ ರಾಜೇಂದ್ರ ಶಿಂಧೆ ಆಯ್ಕೆ

ಮುಂಬಯಿ : ಇತ್ತೀಚೆಗೆ ಮುಂಬಯಿ ಉಪನಗರದ ಥಾಣೆ ಮಹಾನಗರ ಪಾಲಿಕೆ (ಟಿಎಂಸಿ)ಗೆ ನಡೆದ ಸ್ಥಳೀಯಾಡಿತ ಚುನಾವಣೆಯಲ್ಲಿ ಥಾಣೆ ಅಲ್ಲಿನ ಮಾನ್ಪಾಡ ಮನೋರಮಾ ನಗರದ 3ಸಿ ವಾರ್ಡ್‍ನಿಂದ ಶಿವಸೇನಾ ಪಕ್ಷದ ಅಭ್ಯಥಿರ್üಯಾಗಿದ್ದು ಸತತ ಮೂರನೇ ಅವಧಿಗೆ ಸ್ಪರ್ಧಿಸಿ ವಿಜೇತರೆಣಿಸಿದ್ದ ಉಡುಪಿ ಜಿಲ್ಲೆಯ ಕಟಪಾಡಿ ಎಣಗುಡ್ಡೆ ನಿವಾಸಿ ತುಳು ಕನ್ನಡತಿ ದಿ| ಗುರುವ ಕಾಂತಪ್ಪ ಪೂಜಾರಿ ಸುಪುತ್ರಿ ವಿೂನಾಕ್ಷಿ (ರಾಜೇಂದ್ರ ಶಿಂಧೆ) ಪೂಜಾರಿ ಇಂದಿಲ್ಲಿ ಸೋಮವಾರ ಥಾಣೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಥಾಣೆ ಮಹಾನಗರ ಪಾಲಿಕೆಯ ಒಟ್ಟು 131 ಸ್ಥಾನಗಳಿಗೂ ಮತದಾನ ನಡೆದಿದ್ದು ಶಿವಸೇನೆ ಪಕ್ಷವು 67 ಸ್ಥಾನಗಳಲ್ಲಿ ಜಯಗಳಿತ್ತು. ಎನ್‍ಸಿಪಿ 34, ಬಿಜೆಪಿ 23, ಕಾಂಗ್ರೇಸ್ (ಐ) 03, ಪಕ್ಷೇತರರು 04 ಸ್ಥಾನಗಳನ್ನು ಪಡೆದಿದ್ದವು. ಈ ವಾರ್ಡ್‍ನಿಂದ ಈ ಬಾರಿ ಬಿಜೆಪಿ, ಕಾಂಗ್ರೇಸ್ (ಐ), ಎನ್‍ಸಿಪಿ, ಎಂಎನ್‍ಎಸ್ ಸೇರಿದಂತೆ ಐದು ಪಕ್ಷಗಳ ಅಭ್ಯಥಿರ್üಗಳಷ್ಟೇ ಸ್ಪರ್ಧಿಸಿ ಪಂಚಕೋಣ ಸ್ಪರ್ಧೆ ಏರ್ಪಾಡಿತ್ತು. ಆ ಪಯ್ಕಿ ವಿೂನಾಕ್ಷಿ ಪೂಜಾರಿ ದಾಖಲೆ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಮಾ.02: ರಂದು ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದ ವಿೂನಾಕ್ಷಿ ಪೂಜಾರಿ ಅಂದೇ ಮೇಯರ್ ಸ್ಥಾನಕ್ಕೆ ಆಯ್ಕೆ ಆಗಿದ್ದರೂ ಚುನಾವಣಾ ಆಯೋಗದ ನಿಯಮಾನುಸಾರ ಅಧಿಕೃತವಾಗಿ ಇಂದಿಲ್ಲಿ ವಿೂನಾಕ್ಷಿ ಪೂಜಾರಿ ಅವರನ್ನು ಥಾಣೆ ಮೇಯರ್ ಎಂದು ಪ್ರಕಟಿಸಿತು.

ಥಾಣೆ ಮೇಯರ್ ಪಟ್ಟವನ್ನಲಂಕರಿಸಿದ ವಿೂನಾಕ್ಷಿ ಪೂಜಾರಿ ಅವರನ್ನು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶ ನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಸರ್ವ ಪದಾಧಿಕಾರಿಗಳು, ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ನಿರ್ದೇಶಕ ವಾಸುದೇವ ಆರ್.ಕೋಟ್ಯಾನ್, ಬಿಲ್ಲವ ಪಾಲಿಟಿಕಲ್ ಗೈಡ್ ಮಹಾರಾಷ್ಟ್ರ ಇದರ ಮುಖ್ಯಸ್ಥ ರೋಹಿತ್ ಎಂ.ಸುವರ್ಣ, ಎಲ್.ವಿ ವಿೂನ್, ಎನ್‍ಸಿಪಿ ಮುಂಬಯಿ ಉಪಾಧ್ಯಕ್ಷ ಲಕ್ಷ ್ಮಣ ಪೂಜಾರಿ, ತೋನ್ಸೆ ಸಂಜೀವ ಪೂಜಾರಿ ಮತ್ತಿತರ ಗಣ್ಯರು ಅಭಿನಂದಿಸಿದ್ದಾರೆ.


Spread the love