ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಹೆಚ್‌ಡಿಕೆ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥನೆ

Spread the love

ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಹೆಚ್‌ಡಿಕೆ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥನೆ

ಮಂಗಳೂರು: ಮಾಜಿ ಮುಖ್ಯಮಂತ್ರಿ  ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ ಕುಮಾರ ಸ್ವಾಮಿ ಅರೋಗ್ಯ ಸುಧಾರಣೆಯಾಗಲಿ ಎಂದು  ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳ ವತಿಯಿಂದ ಶನಿವಾರ ಮಂಗಳೂರು ನಗರದ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥೆಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮಹಾರುದ್ರಾಭಿಶೇಕ ವಿಶೇಷ ಪೂಜೆ ಸಲ್ಲಿಸಲಾಯಿತು.

 ನಂತರ ಪ್ರಸಿದ್ಧ ದರ್ಗಾ, ವಿಲಾಗ್ರಿಸ್ ಚರ್ಚ್ ಗಳಿಗೂ ವಿಶೇಷ ಪೂಜೆಯನ್ನು ದ.ಕ ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ನೇತೃತ್ವದಲ್ಲಿ ನೇರವೇರಿತು

 ಇದೇ ಸಂದರ್ಭದಲ್ಲಿ ರಾಜ್ಯ ನಾಯಕರುಗಳಾದ ಗೋಪಾಲಕೃಷ್ಣ ಅತ್ತಾವರ, ಪೈಜಲ್, ರತ್ನಕರ್ ಸುವರ್ಣ,ನಾಸಿರ್, ಜಿಲ್ಲಾ ಯುವ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂದನ ಗೌಡ, ಜಿಲ್ಲಾ ಯುವ ಸಂಘಟನಾ ಕಾರ್ಯದರ್ಶಿ ಅರ್ಷಕ್ ಇಸ್ಮಾಯಿಲ್, ಜಿಲ್ಲಾ ಯುವ ಕಾರ್ಯದರ್ಶಿ ಡೇಸ್ಮಂಡ್, ಹಿತೇಶ್ ರೈ, ವಿಧ್ಯಾರ್ಥಿ ನಾಯಕರಾದ ಸೀನಾನ್, ತೇಜಸ್ ನಾಯಕ್, ಲೋಯ್ಡ್ ಮುಲ್ಕಿ   ಉಪಸ್ಥಿತರಿದ್ದರು.


Spread the love