ದಕ ಜಿಲ್ಲಾ ಲೋಕಸಭಾ ಅಭ್ಯರ್ಥಿಯಾಗಿ ಮಿಥುನ್ ರೈ ಆಯ್ಕೆ

Spread the love

ದಕ ಜಿಲ್ಲಾ ಲೋಕಸಭಾ ಅಭ್ಯರ್ಥಿಯಾಗಿ ಮಿಥುನ್ ರೈ ಆಯ್ಕೆ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಅವರ ಹೆಸರನ್ನು ಅಂತಿಮಗೊಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ರಮಾನಾಥ ರೈ, ಬಿ ಕೆ ಹರಿಪ್ರಸಾದ್, ಐವಾನ್ ಡಿಸೋಜ, ಕಣಚೂರು ಮೋನು ಮತ್ತು ಮಿಥುನ್ ರೈ ಅವರುಗಳ ಹೆಸರುಗಳು ಪಟ್ಟಿಯಲ್ಲಿದ್ದು ಕೊನೆಗೆ ಪಕ್ಷದ ಹೈಕಮಾಂಡ್ ಮಿಥುನ್ ರೈ ಹೆಸರನ್ನು ಅಂತಿಮಗೊಳಿಸಿದೆ.

ಯುವ ನಾಯಕರಾಗಿರುವ ಮಿಥುನ್ ರೈ ಅವರಿಗೆ ಯುವಕರ ಬೆಂಬಲವಿದ್ದು ಗೆಲ್ಲುವ ಅಭ್ಯರ್ಥಿಯೆಂದೇ ಬಿಂಬಿಸಲಾಗಿದೆ. ಮಿಥುನ್ ರೈ ಅಭ್ಯರ್ಥಿತನವನ್ನು ಸದ್ಯವೇ ಅಧಿಕೃತವಾಗಿ ಪಕ್ಷ ಪ್ರಕಟಿಸಲಿದೆ.


Spread the love