ದಕ ಜಿಲ್ಲಾ ವಿದ್ಯಾರ್ಥಿ ಜನತಾ ದಳ ಉದ್ಘಾಟನೆ ಪೂರ್ವಭಾವಿ ಸಭೆ

Spread the love

ದಕ ಜಿಲ್ಲಾ ವಿದ್ಯಾರ್ಥಿ ಜನತಾ ದಳ ಉದ್ಘಾಟನೆ ಪೂರ್ವಭಾವಿ ಸಭೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿ ಜನತಾ ದಳವನ್ನು ಗಟ್ಟಿಯಾಗಿ ಬಲಗೊಳಿಸುವ ನಿಟ್ಟಿನಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾರ್ಥಿ ಜನತಾ ದಳ ಉದ್ಘಾಟನಾ ಸಮಾರಂಭದ ಪೂರ್ವಭಾವಿ ಸಭೆಯು ಶನಿವಾರ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆಯಿತು.

ಸಭೆಯ ನೇತೃತ್ವ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳದ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ರವರು ಜಿಲ್ಲೆಯಲ್ಲಿ ಶಾಂತಿ ನೆಲೆಸುವ ಪ್ರಯತ್ನ ವಿದ್ಯಾರ್ಥಿಗಳು ಮುಂದಾಗಬೇಕು ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ಮಾಡಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಬೇಕು ಜಿಲ್ಲೆಯಲ್ಲಿ ಜಾತ್ಯತೀತ ಜನತಾದಳದ ತತ್ವ ಸಿದ್ಧಾಂತವನ್ನು ಒಪ್ಪಿ ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವಲ್ಲಿ ತಾವೆಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು

ಜಿಲ್ಲಾ ಯುವ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂದನ ಗೌಡ ವಿದ್ಯಾರ್ಥಿ ಜನತಾ ದಳದ ಉದ್ಘಾಟನಾ ಪೂರ್ವಭಾವಿ ಪೂರ್ವಭಾವಿ ಬಗ್ಗೆ ಮಾಹಿತಿ ನೀಡಿದರು

ಇದೇ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪೈಜಲ್. ಜಿಲ್ಲಾ ಯುವ ಸಂಘಟನಾ ಕಾರ್ಯದರ್ಶಿ ಆರ್ಷಕ್. ವಿದ್ಯಾರ್ಥಿ ಮುಖಂಡರುಗಳಾದ ಸಿನಾನ್. ತೇಜಸ್ ನಾಯಕ್. ಹಾಜೀಕ್. ರಿತೇಶ್ ರೈ. ರಾಯುಡ್  ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು


Spread the love