ದಕ ಜಿಲ್ಲೆಯಲ್ಲಿ ಕೊರೋನ ವೈರಸ್ ಗೆ 26 ವರ್ಷದ ಯುವಕ ಬಲಿ

Spread the love

ದಕ ಜಿಲ್ಲೆಯಲ್ಲಿ ಕೊರೋನ ವೈರಸ್ ಗೆ 26 ವರ್ಷದ ಯುವಕ ಬಲಿ

ಮಂಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 26 ವರ್ಷದ ಯುವಕನೋರ್ವ ಕೊರೋನ ಸೋಂಕಿಗೆ ಬಲಿಯಾಗುವುದರೊಂದಿಗೆ ದಕ ಜಿಲ್ಲೆಯಲ್ಲಿ ಕೊರೋನ ಸಂಪರ್ಕದಿಂದಾಗಿ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಮೃತ ಯುವಕ ಮುಂಬೈನಿಂದ ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ್ದು, ಈತನನ್ನು ಮೇ 28 ಮತ್ತು 29 ರಂದು ಜಿಲ್ಲಾಡಳಿತದ ಅಧೀನದ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದರು.

ಬಳಿಕ ಯುವಕನಿಗೆ ಕಿಡ್ನಿ ಸಮಸ್ಯೆ ಉಲ್ಬಣಗೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು, ಜೂನ್ 14ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಯುವಕನ ಗಂಟಲು ದ್ರವ ಮಾದರಿಯ ವರದಿಯಲ್ಲಿ ಕೊರೋನ ಸೋಂಕು ಇರುವುದು ದೃಢಪಟ್ಟಿದೆ.


Spread the love