ದಕ ಜಿಲ್ಲೆಯಲ್ಲಿ ಬುಧವಾರ ದಾಖಲೆಯ ಕೊರೋನಾ ಮಹಾಸ್ಪೋಟ – 183 ಮಂದಿಗೆ ಪಾಸಿಟಿವ್

Spread the love

ದಕ ಜಿಲ್ಲೆಯಲ್ಲಿ ಬುಧವಾರ ದಾಖಲೆಯ ಕೊರೋನಾ ಮಹಾಸ್ಪೋಟ – 183 ಮಂದಿಗೆ ಪಾಸಿಟಿವ್

ಮಂಗಳೂರು: ಕಳೆದ ಒಂದು ವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ನೂರರ ಗಡಿ ದಾಟಿ ಮುನ್ನುಗ್ಗುತ್ತಿದ್ದರೆ ಬುಧವಾರ ದಾಖಲೆಯ 183 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.

ಜಿಲ್ಲೆಯಲ್ಲಿ ಬುಧವಾರ ಸ್ವೀಕೃತವಾದ ವರದಿಯಲ್ಲಿನ ಸೋಂಕಿತರ ಪೈಕಿ 65 ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಇನ್ನುಳಿದಂತೆ ಐಎಲ್‌ಐ (ಶೀತ-ಜ್ವರ) 25, ನಾಲ್ಕು ಎಸ್‌ಎಆರ್‌ಐ (ಉಸಿರಾಟ ತೊಂದರೆ) ಪ್ರಕರಣ, ರ್ಯಾಂಡಮ್ ಪರೀಕ್ಷೆಯಲ್ಲಿ 22, ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್‌ನಲ್ಲಿ (ಮೂಲ ನಿಗೂಢ) 54, ಪ್ರೀ ಸರ್ಜರಿ ಪರೀಕ್ಷೆಯಲ್ಲಿ ಐವರು, ಸೌದಿ ಅರೇಬಿಯ, ಮಸ್ಕತ್, ದುಬೈನಿಂದ ಬಂದ ಐವರು, ಮಹಾರಾಷ್ಟ್ರದಿಂದ ಇಬ್ಬರು, ಬೆಂಗಳೂರಿನಿಂದ ಬಂದ ಓರ್ವನಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರೆಲ್ಲರನ್ನೂ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ


Spread the love