ದಕ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲವುದೇ ಯುವ ಕಾಂಗ್ರೆಸ್ ಗುರಿ;  ಮಿಥುನ್ ರೈ

Spread the love

ದಕ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲವುದೇ ಯುವ ಕಾಂಗ್ರೆಸ್ ಗುರಿ;  ಮಿಥುನ್ ರೈ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ಯುವ ಕಾಂಗ್ರೆಸಿನ ಗುರಿಯಾಗಿದ್ದು, ತನಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ಸಿಗದಿರುವುದಕ್ಕೆ ಯಾರ ಮೇಲೂ ಕೂಡ ಬೇಸರವಿಲ್ಲ ಎಂದು ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ.

ಅವರು ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಾಗೂ ಮುಲ್ಕಿ-ಮೂಡಬಿದರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ ಪಕ್ಷವನ್ನು ಬಲಪಡಿಸಿದ್ದರಿಂದ ಸಹಜವಾಗಿ ಇಲ್ಲಿ ಟಿಕೇಟ್ ಆಕಾಂಕ್ಷಿಯಾಗಿದ್ದೆ ಕೂಡ. ಟಿಕೆಟ್ ಸಿಗದಿರುವುದಕ್ಕೆ ನೋವಾಗಿದ್ದು ನಿಜ ಆದರೆ ಯಾರ ಮೇಲೆ ಕೂಡ ಬೇಸರವಿಲ್ಲ ಮುಂದೆ ಪಕ್ಷ ಉತ್ತಮ ಅವಕಾಶ ನೀಡುವ ಭರವಸೆ ಇದೆ ಎಂದರು.

ದಕ ಜಿಲ್ಲೆಯ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಪಡೆಯುವತ್ತ ಯುವ ಕಾಂಗ್ರೆಸ್ ಶ್ರಮಿಸಲಿದ್ದು ರಾಹುಲ್ ಗಾಂಧಿ ಪ್ರಧಾನಿ ಹುದ್ದೆ ಅಲಂಕರಿಸುವುದೇ ಯುವ ಕಾಂಗ್ರೆಸಿನ ಸಂಕಲ್ಪವಾಗಿದೆ ಎಂದರು.

ಟಿಕೆಟ್ ಪಟ್ಟಿ ಬಿಡುಗಡೆ ಬಳಿಕ ನಾನು ದಿಲ್ಲಿಯಲ್ಲಿ ರಾಹುಲ್ ಗಾಂಧಿಯವರನ್ನು ಬೇಟಿ ಮಾಡಿ ಮಾತನಾಡಿದ್ದು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಯುವ ಕಾಂಗ್ರೆಸ್ ಸಕ್ರಿಯವಾಗುವಂತೆ ಸೂಚಿಸಿದ್ದು ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಯುವ ಕಾಂಗ್ರೆಸ್ ನಿರ್ಧರಿಸಿದೆ ಎಂದರು.

ತನಗೆ ಟಿಕೆಟ್ ಸಿಗದ ಬೇಸರದಲ್ಲಿ ಜಿಲ್ಲಾ ಯುವ ಕಾಂಗ್ರೆಸಿನ ಕೆಲವು ಪದಾಧಿಕಾರಿಗಳು ಸಲ್ಲಿಸಿದ್ದ ರಾಜೀನಾಮೆಯನ್ನು ತಿರಸ್ಕರಿಸಿದ್ದು ನಾವೆಲ್ಲರೂ ಪಕ್ಷ ಸಂಘಟನೆಯಲ್ಲಿ ಸಕ್ರಯವಾಗಿ ತೊಡಗಿಸಿಕೊಳ್ಳಲಿದ್ದೇವೆ ಎಂದರು.


Spread the love