ದಕ ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿ ಮುಂದುವರೆಸಬೇಕು; ನಳಿನ್ ಕುಮಾರ್ ಕಟೀಲ್

Spread the love

ದಕ ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿ ಮುಂದುವರೆಸಬೇಕು; ನಳಿನ್ ಕುಮಾರ್ ಕಟೀಲ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಕಾರ್ಯಕಾರಿಣಿ ಸಭೆಯು ಕೊಡಿಯಾಲ್ ಬೈಲ್ ನಲ್ಲಿರುವ ಜಿಲ್ಲಾ ಬಿಜೆಪಿ ಕಾರ್ಯಾಲಯದ ಅಕ್ಷಯ ಸಭಾಭವನದಲ್ಲಿ ನಡೆಯಿತು.

ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ದ.ಕ.ಜಿಲ್ಲೆ ಬಿ.ಜೆ.ಪಿಯ ಭದ್ರಕೋಟೆ ಎಂದು ರುಜುವಾತಾಗಿದೆ. ಜನಸಂಘದಿಂದ ಇಂದಿನ ತನಕ ಕಾಯಕರ್ತರು ರಕ್ತವನ್ನು ಬೆವರಾಗಿ ಹರಿಸಿದ ಕಾರ್ಯದಿಂದ ನಾವು ಯಶಸ್ವಿಯಾಗಿದ್ದೇವೆ. ಮುಂದೆಯೂ ದ.ಕ.ಜಿಲ್ಲೆಯಲ್ಲ್ಲಿ ಬಿಜೆಪಿಯು ಭದ್ರಕೋಟೆಯಾಗಿ ಉಳಿಯಬೇಕು. ನಾವು ಪಕ್ಷವನ್ನು ಬೆಳೆಸಬೇಕೆಂದು ಎಂದು ಕರೆಯಿತ್ತರು.

ವಿಭಾಗ ಸಹ ಪ್ರಭಾರಿ ಪ್ರತಾಪ್‍ಸಿಂಹ ನಾಯಕ್ ಶಾಸಕರುಳಿಗೆ ಅಭಿನಂದನೆ ಮಾತುಗಳನ್ನಾಡಿ ಅವರ ಜವಾಬ್ದಾರಿಗಳನ್ನು ನೆನಪಿಸಿದರು. ನೂತನವಾಗಿ ಆಯ್ಕೆಯಾದ ಎಸ್.ಅಂಗಾರ, ಸಂಜೀವ ಮಠಂದೂರು. ರಾಜೇಶ್ ನಾೈಕ್ ಉಳಿಪ್ಪಾಡಿ, ಉಮಾನಾಥ್ ಕೋಟ್ಯಾನ್, ಹರೀಶ್ ಪೂಂಜಾ, ವೇದವ್ಯಾಸ್ ಕಾಮತ್, ಡಾ| ಭರತ್ ಶೆಟ್ಟಿಯವರನ್ನು ಸಂಸದರು ಶಾಲು ಹೊದಿಸಿ ಪುಸ್ತಕ ನೀಡಿ ಗೌರವಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ಕ್ಯಾ| ಗಣೇಶ್ ಕಾರ್ಣೆಕ್, ಸಂತೋಷ್ ಕುಮಾರ್ ರೈ ರವರನ್ನು ಕೂಡ ಗೌರವಿಸಲಾಯಿತು.

ವೇದಿಕೆಯಲ್ಲಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಚುನಾವಣಾ ನಿರ್ವಹಣಾ ಸಮಿತಿ ಸಹ ಸಂಚಾಲಕ ರವಿಶಂಕರ್ ಮಿಜಾರ್ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ ಕಾರ್ಯಕ್ರಮ ನಿರೂಪಿಸಿದರು, ಕ್ಯಾ| ಬ್ರಿಜೇಶ್ ಚೌಟ ಸ್ವಾಗತಿಸಿದರು.


Spread the love