ದಕ ಬಿಜೆಪಿ ವತಿಯಿಂದ ಪಂಡಿತ್ ದೀನ್ ದಯಾಳ್ ಜನ್ಮಶತಾಬ್ದಿ ಸಮಾರೋಪ

Spread the love

ದಕ ಬಿಜೆಪಿ ವತಿಯಿಂದ ಪಂಡಿತ್ ದೀನ್ ದಯಾಳ್  ಜನ್ಮಶತಾಬ್ದಿ ಸಮಾರೋಪ 

ಮಂಗಳೂರು: ದ.ಕ ಜಿಲ್ಲಾ ಭಾ.ಜ.ಪಾರ್ಟಿ ವತಿಯಿಂದ 2016ರ ಸಪ್ಟೆಂಬರ್ 25 ರಂದು ಪ್ರಾರಂಭವಾದ ಪಂಡಿತ್ ದೀನ್ ದಯಾಳ್ ಅವರ ಜನ್ಮಶತಾಬ್ದಿ ಸಮಾರಂಭ, ಅನೇಕ ಸಂಘಟನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಉತ್ತಮವಾದ ರಾಷ್ಟ್ರ ನಿರ್ಮಾಣದ ಉದ್ದೇಶ ಮತ್ತು ಪಂಡಿತ್ ದೀನ್ ದಯಾಳ್ ಜೀಯವರ ಏಕಾತ್ಮತ ಮಾನವತಾವಾದ ಮತ್ತು ಅಂತ್ಯೋದಯದ ಕಲ್ಪನೆಯನ್ನು ಸಾಕಾರಗೊಳಿಸಲು ತನ್ನ ಕಾರ್ಯಕರ್ತರನ್ನು ಜಾಗೃತಿಗೊಳಿಸುವ ಕಾರ್ಯವನ್ನು ನಡೆಸಿದ ಧನ್ಯತಾಭಾವದೊಂದಿಗೆ ಇಂದು ಸಮಾರೋಪ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿದೆ.

ಈ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿಯ ವಿಭಾಗ ಸಹಪ್ರಭಾರಿಗಳಾದ ಪ್ರತಾಪ್‍ಸಿಂಹ ನಾಯಕ್ ರವರು ದಿಕ್ಸೂಚಿ ಭಾಷಣದ ಮುಖಾಂತರ ಪಂಡಿತ್ ದೀನ್ ದಯಾಳ್‍ಜೀಯವರ ಕಲ್ಪನೆಯಂತೆ ದೇಶದ 125 ಕೋಟಿ ಜನರಿಗೆ ”ಸಬ್ ಕಾ ಸಾತ್ ಸಬ್ ಕಾ ವಿಕಾಸ್” ಎಂಬ ತತ್ವದಡಿ ಆಡಳಿತ ನೀಡಿ ದೇಶವನ್ನು ವಿಶ್ವಗುರು ಸ್ಥಾನಕ್ಕೇರಿಸಲು ಪಕ್ಷದ ಎಲ್ಲಾ ಕಾರ್ಯಕರ್ತರು ಕೈ ಜೋಡಿಸಬೇಕೆಂದು ಕರೆ ನೀಡಿದರು.

ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಅಧ್ಯಕ್ಷರಾದ ಸಂಜೀವ ಮಠಂದೂರುರವರು ಅಧ್ಯಕ್ಷೀಯ ಭಾಷಣ ನೀಡಿದರು.ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್.ಎಂ, ಕ್ಯಾಪ್ಟನ್ ಬ್ರಿಜೇಶ್ ಚೌಟ,ಕಿಶೋರ್ ರೈ ವೇದಿಕೆಯಲ್ಲಿದ್ದರು. ಹಿಂದೂ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೋಟ ಕೃಷ್ಣಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.


Spread the love