ದನಗಳ್ಳತನ : ಕೊಣಾಜೆ ಪೊಲೀಸರಿಂದ ಮೂವರ ಬಂಧನ

Spread the love

ದನಗಳ್ಳತನ : ಕೊಣಾಜೆ ಪೊಲೀಸರಿಂದ ಮೂವರ ಬಂಧನ

ಮಂಗಳೂರು: ದನಗಳ್ಳತನ ಮಾಡಿ ವಾಹನ ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿ ದನಗಳನ್ನು ಮತ್ತು ಇತರ ಸೊತ್ತುಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಮೂಡಬಿದ್ರೆ ನಿವಾಸಿ ಶಾಫಿ@ಕಲಂದರ್ ಶಾಫಿ (28), ದಬ್ಬೇಳಿ ಲಚ್ಚಿಲ್ ಮನೆ ನಿವಾಸಿ ಸಾಧಿಕ್ @ಮಹಮ್ಮದ್ ಸಾಧಿಕ್ (30), ಬಂಟ್ವಾಳ ನರಿಂಗಾನ ನಿವಾಸಿ ಆಸೀಫ್ @ ಮೊಹಮ್ಮದ್ ಕಲಂದರ್ ಎಂದು ಗುರುತಿಸಲಾಗಿದೆ.

ಡಿಸೆಂಬರ್ 17ರಂದು ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಸುಮಾರು ರೂ 1.04 ಲಕ್ಷ ಮೌಲ್ಯದ ದನಗಳನ್ನು ಕಳ್ಳತನ ಮಾಡಿದ್ದು ಸದ್ರಿ ಪ್ರಕರಣಗಳ ಆರೋಪಿ ಹಾಗೂ ಸೊತ್ತು ಪತ್ತೆ ಬಗ್ಗೆ ಅಧಿಕಾರಿ ಹಾಗೂ ಸಿಬಂದಿಗಳು ಇಲಾಖಾ ವಾಹನಗಳಲ್ಲಿ ಸಂಚರಿಸಿಕೊಂಡಿರುವಾಗ ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯಂತೆ ಪ್ರಕರಣದ ಆರೋಪಿಗಳು ಮಂಗಳೂರು ತಾಲೂಕು ಅಂಬ್ಲಮೊಗರು ಗ್ರಾಮದ ಎಲಿಯಾರುಪದವು ಪರಿಸರದಲ್ಲಿ ಒಂದು ಒಮಿನಿ ಕಾರಿನಲ್ಲಿ ಸಂಚರಿಸುವ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದಾಗ ಪೊಲೀಸ್ ವಾಹನವನ್ನು ಕಂಡು ತಪ್ಪಿಸಿಕೊಳ್ಳು ಪ್ರಯತ್ನಿಸಿದ ಒಮಿನಿ ಕಾರನ್ನು ಹಿಡಿದು ವಿಚಾರಿಸಿ ಆರೋಪಿಗಳನ್ನು ವಶಕ್ಕೆ ಪಡೆದು, ಆರೋಪಿಗಳ ಹೇಳಿಕೆಯಂತೆ ಪಂಚರೊಂದಿಗೆ ಪ್ರಕರಣದಲ್ಲಿ ಕಳವು ಮಾಡಿದ ದನಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ2.10 ಲಕ್ಷ ಅಂದಾಜಿಸಲಾಗಿದ್ದು ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.

 


Spread the love