ದರೋಡೆ ಪ್ರಕರಣದ ಆರೋಪಿಗಳ ಬಂಧನ

Spread the love

ದರೋಡೆ ಪ್ರಕರಣದ ಆರೋಪಿಗಳ ಬಂಧನ

ಮಂಗಳೂರು ನಗರ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಮಂಗಳೂರು ನಗರದ ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಬೇಧಿಸಿ ರೂ.16,57,000/- ನಗದು ಹಣ,ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

ದಿನಾಂಕ:20-10-2018 ರಂದು ರಾತ್ರಿ 7-30 ಗಂಟೆಗೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಶ್ರೀರಾಮ ಭಜನಾ ಮಂದಿರ ರಸ್ತೆಯಿಂದಾಗಿ ಮನೆಕಡೆಗೆ ಹೋಗುತ್ತಿದ್ದ ಸುಮಾರು 64 ವರ್ಷ ಪ್ರಾಯದ ಗಣೇಶ್ ಕಾಮತ್ ಎಂಬವರನ್ನು ದೂಡಿಹಾಕಿ ಹಲ್ಲೆ ಮಾಡಿ ಅವರ ಕೈಯಲ್ಲಿದ್ದ 27 ಲಕ್ಷ ನಗದು ಹಣವಿದ್ದ ಚೀಲವನ್ನು ದರೋಡೆ ಮಾಡಿ ಬೆದರಿಕೆ ಹಾಕಿದ ಬಗ್ಗೆ ಉರ್ವ ಪೊಲೀಸ್ ಠಾಣಾ ಅ ಕ್ರ 154-2018 ಕಲಂ:394 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಆರೋಪಿಗಳಾದ ಮೋಟಾರ್ ಸೈಕಲ್ ಸವಾರ ಮಹಮ್ಮದ್ ಶಾಫಿ(26) ತಂದೆ:ದಿ/ಹಸನಬ್ಬ ವಾಸ:111-95 A ನೆಜಿಕಾರ್,ಇಳಂತಿಲ,ಬೆಳ್ತಂಗಡಿ.ದಕ್ಷಿಣ ಕನ್ನಡ ಮತ್ತು 2.ಮಹಮ್ಮದ್ ರಿಯಾಜ್(19)ತಂದೆ:ಇಸಾಕ್ ವಾಸ:3-96 ಎಫ್ ಇಳಂತಿಲ ನೆಜಿಕಾರ್,ಬೆಳ್ತಂಗಡಿ. ದಕ್ಷಿಣ ಕನ್ನಡ. ಎಂಬವರನ್ನು ಬಂಧಿಸಿದ್ದು ಅವರಿಂದ ರೂ 16,57,000/- ನಗದು ಹಣ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲ್ ನಂಬರ್ ಕೆಎ 21 U 6006 ನೇದನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 17,17,000/- ರೂ ಆಗಿರುತ್ತದೆ.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಟಿ ಆರ್ ಸುರೇಶ್ ಐಪಿಎಸ್, ಮಾನ್ಯ ಉಪ ಪೊಲೀಸ್ ಆಯುಕ್ತರು (ಕಾ&ಸು),ಶ್ರೀ ಹನುಮಂತರಾಯ ಐಪಿಎಸ್ ,ಮಾನ್ಯ ಉಪ ಪೊಲೀಸ್ ಆಯುಕ್ತರು(ಅಪರಾಧ&ಸಂಚಾರ)ಶ್ರೀಮತಿ ಉಮಾ ಪ್ರಶಾಂತ, ಸಹಾಯಕ ಪೊಲೀಸ್ ಆಯುಕ್ತರು,ಕೇಂದ್ರ ಉಪ ವಿಭಾಗ,ಮಂಗಳೂರು ನಗರ ಶ್ರೀ ಭಾಸ್ಕರ ಒಕ್ಕಲಿಗ, ಹಾಗೂ ಕೇಂದ್ರ ಉಪ ವಿಭಾಗ ರೌಡಿ ನಿಗ್ರಹ ದಳದ ಪೊಲೀಸ್ ನಿರೀಕ್ಷಕರಾದ ಶ್ರೀ ರವೀಶ್ ಎಸ್ ನಾಯಕ್,ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಪ್ರದೀಪ ಟಿ ಆರ್ ಹಾಗೂ ಸಿಬ್ಬಂದಿಗಳಾದ ವೆಲೆಸ್ಟೀನ್ ಡಿ ಸೋಜಾ,ಗಂಗಾಧರ ಎನ್,ಸಂತೋಷ ಸಸಿಹಿತ್ಲು,ಕಿಶೋರ್ ಕೋಟ್ಯಾನ್,ಪ್ರಮೋದ್ ಮೇರಿಹಿಲ್,ನಾಗರಾಜ ಚಂದರಗಿ,ಬಸವರಾಜ ನಾಯ್ಕರ ರವರು ಭಾಗವಹಿಸಿರುತ್ತಾರೆ.


Spread the love