ದರೋಡೆ ಮತ್ತು ಕಳವು ಪ್ರಕರಣಗಳ ಸುಳ್ಳು ಕಥೆ ಸೃಷ್ಡಿಸಿದಾತನ ಸರೆ

Spread the love

ದರೋಡೆ ಮತ್ತು ಕಳವು ಪ್ರಕರಣಗಳ ಸುಳ್ಳು ಕಥೆ ಸೃಷ್ಡಿಸಿದಾತನ ಸರೆ

ಮಂಗಳೂರು: ಮಂಗಳೂರು ರಥಬೀದಿಯಲ್ಲಿ ಚಿನ್ನದ ಕೆಲಸ ಮಾಡಿ ಚಿನ್ನದೊಡವೆ ಹಿಡಿದುಕೊಂಡು ತೊಕ್ಕೊಟ್ಟು ಹಾಜಿ ಜುವೆಲ್ಲರಿಗೆ ಕೊಡಲು ಬರುವಾಗ ರಾತ್ರಿ 9-00 ಗಂಟೆಗೆ ನನ್ನನ್ನು ಮಹಾಕಾಳಿಪಡ್ಪು ಬಳಿ ಯಾರೋ ಅಪರಿಚಿತರು ಅಡ್ಡ ಹಾಕಿ ಕಣ್ಣಿಗೆ ಮೆಣಸಿನ ಹುಡಿ ಎರಚಿ ಸುಮಾರು 135000/- ಮೌಲ್ಯದ ಸುಮಾರು 54 ಬಂಗಾರವನ್ನು ದರೋಡೆ ಮಾಡಿ ಕೊಂಡು ಹೋಗಿದ್ದಾರೆ ಎಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಪಿರ್ಯಾದಿಯನ್ನು ನೀಡಿ ಪ್ರಕರಣ ತನಿಖೆಯಲ್ಲಿರುವ ಸಮಯ ದಿನಾಂಕ 22-03-2018 ರಂದು ರಾತ್ರಿ ಮಂಗಳೂರು ತಾಲೂಕು ಕಿನ್ಯಾ ಗ್ರಾಮದ ಕನಕಮುಗೇರು ಎಂಬಲ್ಲಿರುವ ಶ್ರೀ ಕಾಳಿಕಾಂಭ ನಿಲಯ ನನ್ನ ಮನೆಯ ಹಿಂಬದಿಯ ಬಾಗಿಲಿನ ಮೂಲಕ ಯಾರೋ ಕಳ್ಳರು ಒಳಪ್ರವೇಶಿಸಿ ಒಟ್ಟು ರೂ 100000/- ಮೌಲ್ಯದ ಸೊತ್ತುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಎರಡೂ ಪ್ರಕರಣದ ಬಗ್ಗೆ ಹರೀಶ್ ಆಚಾರಿಯವರನ್ನು ಕೂಲಂಕುಶವಾಗಿ ವಿಚಾರಿಸಿದಾಗ ತಾನು ನಷ್ಟದಲ್ಲಿದ್ದ ಕಾರಣ ಸುಳ್ಳು ಕಥೆಯನ್ನು ಸೃಷ್ಟಿಸಿ ನಾನೇ ಒಡವೆಗಳನ್ನು ಕಳವು ಮಾಡಿದ್ದಾಗಿ ಒಪ್ಪಿಕೊಂಡಿರುತ್ತಾನೆ ಮತ್ತು ತೊಕ್ಕೊಟ್ಟುನಲ್ಲಿರುವ ಹಾಜಿ ಗೋಲ್ಡ್ ಆಂಡ್ ಡೈಮಂಡ್ಸ್ ನ ಮಾಲಕರು ನೀಡಿದ್ದ ಸುಮಾರು 54 ಗ್ರಾಂ ತೂಕದ ಚಿನ್ನಾಭರಣದ ಗಟ್ಟಿಯನ್ನು ಕರಗಿಸಿ, ಒಡವೆ ಮಾಡಿ ನೀಡಬೇಕಾಗಿರುವುದರಿಂದ ನಾನೇ ನನ್ನ ಕಣ್ಣಿಗೆ ಮೆಣಸಿನ ಹುಡಿ ಚೆಲ್ಲಿಕೊಂಡು ನಾಟಕ ಮಾಡಿದ ಪಿರ್ಯಾದಿ ಹರೀಶ್ ಆಚಾರಿಯನ್ನು ದಸ್ತಗಿರಿ ಮಾಡಿ ನಿಜ ಬಣ್ಣವನ್ನು ಬಯಲಿಗೆಳೆದು ಆತನ ಬಳಿ ಇದ್ದ ಚಿನ್ನಾಭರಣಗಳನ್ನು ವಶಪಡಿಸಿ ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ದಕ್ಷಿಣ ಎ.ಸಿ.ಪಿ ನೇತೃತ್ವದ ರೌಡಿ ನಿಗ್ರಹದಳದ ಪೊಲೀಸರು ಯಶಸ್ವಿಯಾಗಿದ್ದಾರೆ.

ಹರೀಶ್ ಆಚಾರಿ ರವರು ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದು, ಹಾಜಿ ಗೋಲ್ಡ್ ತೊಕ್ಕೊಟು ಇವರಿಗೆ ನೀಡಬೇಕಾದ ಚಿನ್ನಭರಣಗಳನ್ನು ಕೊಡದೇ ದರೋಡೆ ಎಂಬ ಸುಳ್ಳು ಕಥೆಯನ್ನು ಸೃಷ್ಠಿಸಲು ಕಾರ್ ಸ್ಟ್ರೀಟ್ ಅಂಗಡಿಯಿಂದ ಮೆಣಸಿನ ಹುಡಿ ಪ್ಯಾಕೆಟನ್ನು ಖರೀದಿಸಿ ಮಹಕಾಳಿಪಡ್ಪು ಬಳಿ ಬಂದು ತಾನೆ ಕಣ್ಣಿಗೆ ಮತ್ತು ತಲೆಗೆ ಮೆಣಸಿನ ಹುಡಿಯನ್ನು ಹಾಕಿ ಬಟ್ಟೆಯನ್ನು ಹರಿದುಕೊಂಡು ಚಿನ್ನಾಭರಣಗಳು ಯಾರೋ ದರೋಡೆ ಮಾಡಿರುತ್ತಾರೆ ಎಂದು ಸುಳ್ಳು ಪಿರ್ಯಾದಿಯನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ತಾನೇ ನೀಡಿರುತ್ತಾರೆ. ಹಾಜಿ ಗೋಲ್ಡ್ ತೊಕ್ಕೊಟು ರವರಿಗೆ ನೀಡಬೇಕಾದ ಚಿನ್ನಾಭರಣವನ್ನು ಸರಿದೂಗಿಸಲು ತನ್ನ ಮನೆಗೆ ಬಂದ ನಂಟರಾದ ಅತ್ತೆ ಮತ್ತು ಮಾವನ ಸುಮಾರು ರೂ, 100000/- ಮೌಲ್ಯದ ಚಿನ್ನಾಭರಣಗಳನ್ನು ತಾನೇ ಕಳವು ಮಾಡಿ ತಾನು ಮಾಡಿ ಕೃತ್ಯವನ್ನು ಮುಚ್ಚಿಸಲು ನಾಟಕವಾಡಿ ಪೊಲೀಸರು ಮತ್ತು ಆತನ ಮನೆಯವರನ್ನು ಯಾಮಾರಿಸಲು ಪ್ರಯತ್ನಿಸಿರುತ್ತಾನೆ.

ಈ ದಿನ ಹರೀಶ್ ಆಚಾರಿಯನ್ನು ಕೆ.ಸಿ ರೋಡ್ ಬಳಿ ಬಂಧಿಸಿ ಆತನಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮದ ಕೈಗೊಡಿರುವುದಾಗಿದೆ
ಈ ಕಾರ್ಯಚರಣೆಯಲ್ಲಿ ದಕ್ಷಿಣ ಉಪವಿಭಾಗದ ಎ.ಸಿ.ಪಿ. ಮತ್ತು ರೌಡಿ ನಿಗ್ರಹದಳದ ಸಿಬ್ಬಂದಿಯವರು ಹಾಗೂ ಉಳ್ಳಾಲ ಪಿಐ ಗೋಪಿಕೃಷ್ಣ ಮತ್ತು ಸಿಬ್ಬಂದಿಯವರು ಭಾಗವಹಿಸಿರುತ್ತಾರೆ.


Spread the love

1 Comment

  1. You can cool your feet in central jail man. Raagi mudde with sambaar is good for you. When you come out, Indira canteen is always there.

Comments are closed.