ದರೋಡೆ ಯತ್ನ ಆರೋಪ: ಬಿಹಾರ ಮೂಲದ ಐವರನ್ನು ಬಂಧಿಸಿದ ಡಿಸಿಐಬಿ ಪೋಲಿಸರು

Spread the love

ದರೋಡೆ ಯತ್ನ ಆರೋಪ: ಬಿಹಾರ ಮೂಲದ ಐವರನ್ನು ಬಂಧಿಸಿದ ಡಿಸಿಐಬಿ ಪೋಲಿಸರು

ಮಂಗಳೂರು: ಕುಂಬ್ರ-ಬೆಳ್ಳಾರೆ ರಸ್ತೆಯ ಕೆದಂಬಾಡಿ ಗ್ರಾಪಂ ವ್ಯಾಪ್ತಿಯ ಕೊಲ್ಲಾಜೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪದಲ್ಲಿ ಐವರು ಬಿಹಾರ ಮೂಲದ ಆರೋಪಿಗಳನ್ನು ಡಿಸಿಐಬಿ ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಪ್ರಮೋದ್ ಶರ್ಮ (33), ಅಂಕುಶ್ ರಾಜ್ (24), ಟುನ್ ಟುನ್ ಕುಮಾರ್ (19), ಪ್ರನ್ಸ್ ಕುಮಾರ್ (19), ಮತ್ತು ಕರಣ್ ಕುಮಾರ್ (19) ಎಂದು ಗುರುತಿಸಲಾಗಿದೆ.

ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಸುನಿಲ್. ವೈ. ನಾಯ್ಕ್. ರವರು ತಮ್ಮ ಸಿಬ್ಬಂದಿಗಳೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯ ದಲ್ಲಿ ಮಾಣಿ, ಪುತ್ತೂರು, ಕುಂಬ್ರ ಕಡೆ ಸಂಚರಿಸಿ ಕೊಲ್ಲಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ ಐದು ಜನರು ಅನುಮಾನಾಸ್ಪದವಾಗಿ ಇದ್ದವರನ್ನು ವಿಚಾರಿಸಿದಾಗ ಎಲ್ಲರೂ ಬಿಹಾರ ರಾಜ್ಯದ ವರಾಗಿದ್ದು ಹಿಂದಿ ಭಾಷೆ ಯಲ್ಲಿ ಮಾತಾಡುತ್ತಿದ್ದವರನ್ನು ಕೂಲಂಕುಷವಾಗಿ ವಿಚಾರಿಸಿದಾಗ ಆರೋಪಿಗಳು ಶ್ರೀಮಂತ ರ ಮನೆಯನ್ನು ಗುರುತಿಸಿ ದರೋಡೆ ಮಾಡುವ ಉದ್ದೇಶದಿಂದ ಚೂರಿ,ಕಬ್ಬಿಣದ ರಾಡ್,ಉಳಿ,ಸುತ್ತಿಗೆ,ಮೆಣಸಿನ ಹುಡಿ ಪ್ಯಾಕೆಟ್, ಹ್ಯಾಂಡ್ ಗ್ಲೌಸ್ , ಮತ್ತು ಪ್ಲಾಸ್ಟರ್ ನ್ನು ಹಿಡಿದುಕೊಂಡು ಇದ್ದವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಂಧಿತರನ್ನು ಮುಂದಿನ ಕ್ರಮದ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.


Spread the love