ದಾಖಲೆಪತ್ರಗಳಿಲ್ಲದೆ ಸಾಗಿಸುತ್ತಿದ್ದ 1 ಕೋಟಿ ಹಣ ವಶ; ಮೂವರ ಬಂಧನ

Spread the love

ದಾಖಲೆಪತ್ರಗಳಿಲ್ಲದೆ ಸಾಗಿಸುತ್ತಿದ್ದ 1 ಕೋಟಿ ಹಣ ವಶ; ಮೂವರ ಬಂಧನ

ಮಂಗಳೂರು: ಯಾವುದೇ ದಾಖಲೆಪತ್ರಗಳಿಲ್ಲದೆ ಸಾಗಿಸುತ್ತಿದ 1 ಕೋಟಿ ರೂಪಾಯಿ ಹಣವನ್ನು ಕಂಕನಾಡಿ ಪೋಲಿಸರು ಶುಕ್ರವಾರ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಹಾರಾಷ್ಟ್ರದ ತಾನಾಜಿ (54), ಬೆಳಗಾವಿ ನಿವಾಸಿ ದಿನೇಶ್ ಪ್ರಕಾಶ್ ಸಿಂದೆ (20), ಹಾಗೂ ಮಹರಾಷ್ಟ್ರ ಸಾಂಗ್ಲಿ ನಿವಾಸಿ ಅಮುಲ್ ಮಾಲಿ (29) ಎಂದು ಗುರುತಿಸಲಾಗಿದೆ.

ಶುಕ್ರವಾರ ಕಂಕನಾಡಿ ಪೊಲೀಸ್ ಇನ್ಸ್ ಪೆಕ್ಟರ್ ಅವರು ರಾತ್ರಿ ರೌಂಡ್ಸ್ ನಲ್ಲಿರುವ ಸಮಯ ಖಚಿತ ಬಾತ್ಮಿ ಮೇರೆಗೆ ಹುಂಡೈ ಕಾರನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ಅನುಮಾನಗೊಂಡು ಕಾರಿನ ಚಾಲಕ ಹಾಗೂ ಕಾರಿನಲ್ಲಿದ್ದ ಇತರ ಇಬ್ಬರನ್ನು ಠಾಣೆಗೆ ತಂದು ತೀವ್ರ ವಿಚಾರಣೆಗೊಳಪಡಿಸಿದಾಗ ಯಾವುದೇ ದಾಖಲೆ ಪತ್ರಗಳಿಲ್ಲದೆ 1 ಕೋಟಿ ನಗದು ಹಣವನ್ನು ಕಾರಿನಲ್ಲಿ ಸಾಗಿಸುತ್ತಿರುವುದನ್ನು ಸ್ವಾಧೀನಪಡಿಸಿಕೊಂಡು ಕಾರು ಮತ್ತು ಮೊಬೈಲುಳನ್ನು ವಶಪಡಿಸಿಕೊಳ್ಳಲಾಗಿದೆ.


Spread the love