ದಿನ ಪತ್ರಿಕೆಗಳನ್ನು ಓದಿ ಜ್ಞಾನವನ್ನು ವೃದ್ದಿಸಿ: ಡಾ| ರೊನಾಲ್ಡ್ ಫೆರ್ನಾಂಡಿಸ್

ದಿನ ಪತ್ರಿಕೆಗಳನ್ನು ಓದಿ ಜ್ಞಾನವನ್ನು ವೃದ್ದಿಸಿ: ಡಾ| ರೊನಾಲ್ಡ್ ಫೆರ್ನಾಂಡಿಸ್

ಫೊಕಾಸ್ ಸಂಸ್ಥೆ ಮಂಗಳೂರು ಮತ್ತು ಪೆರ್ಮನ್ನೂರು ವಲಯ ಚರ್ಚ್‍ಗಳ ಪರಿಷತ್ತಿನ ಸಹಕಾರದೊಂದಿಗೆ ಪೆರ್ಮನ್ನೂರು ಸಬಾಸ್ಟಿಯನ್ ಚರ್ಚ್ ಸಭಾಂಗಣದಲ್ಲಿ ಎಸ್ಸೆಸೆಲ್ಸಿ ಹಾಗೂ ಪಿಯುಸಿ ವಿಧ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಶಿಬಿರವನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯರಾದ ಡಾಅನಿಲ್ ರೊನಾಲ್ಡ್ ಫೆರ್ನಾಂಡಿಸ್‍ರವರು ಮಾತನಾಡಿ ವಿಧ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣವನ್ನು ಅಯ್ಕೆ ಮಾಡುವಾಗ ಹೆತ್ತವರ, ಪೋಷಕರ ಅಭಿಪ್ರಾಯದಂತೆ ಆಯ್ಕೆ ಮಾಡುವುದು ಸರಿಯಲ್ಲ, ತಮಗೆ ಆಸಕ್ತಿ ಇದ್ದ ಶಿಕ್ಷಣವನ್ನು ಆಯ್ಕೆ ಮಾಡಬೇಕು. ಕೇವಲ ಪಠ್ಯ ಪುಸ್ತಕಗಳನ್ನು ಓದುವುದು ಮಾತ್ರವಲ್ಲದೆ ದಿನಪತ್ರಿಕೆಗಳನ್ನು ದೃಶ್ಯ ಮಾಧ್ಯಮದ ಮೂಲಕ ಜ್ಞಾನವನ್ನು ವೃದ್ದಿಸಿಕೊಳ್ಳಬೇಕು ಸ್ಪರ್ದಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ಮುಂದಿನ 5 ವರುಷಗಳಲ್ಲಿ ತಮ್ಮ ಜೀವನದ ಸದೃಡ ಭವಿಷ್ಯವನ್ನು ರೂಪಿಸಬಹುದು ಎಂದು ಹೇಳಿದರು.

ಅದ್ಯಕ್ಷತೆ ವಹಿಸಿದ ಪೆರ್ಮನ್ನೂರು ಚರ್ಚಿನ ಪ್ರಧಾನ ಗುರುಗಳಾದ ವಂದನೀಯ ಡಾ| ಜೆ.ಬಿ ಸಲ್ದಾನರವರು ಮಾತನಾಡಿ ವಿಧ್ಯಾರ್ಥಿಗಳು ಸುಶಿಕ್ಷತರಾಗಿ ನಮ್ಮ ದೇಶದಲ್ಲಿ ಸೇವೆ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು ಈ ದೇಶದ ಉತ್ತಮ ಪ್ರಜೆ ಹಾಗೂ ಉತ್ತಮ ನಾಯಕರಾಗಿ ಒಳ್ಳೆಯ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ತಮ್ಮಲ್ಲಿ ಇದೆ ಎಂದು ಹೇಳಿದರು.  ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪ್ರೊಫೆಸರ್ ನೊರ್ಬರ್ಟ್ ಲೋಬೊ, ಪ್ರೊಫೆಸರ್ ಸ್ಟೀವನ್ ಕ್ವಾಡ್ರಸ್, ಫೋಕಸ್ ಸಂಸ್ಥೆಯ ಸಂಚಾಲಕರಾದ ಸುಶೀಲ್ ನೊರೊನ್ಹ, ಪೆರ್ಮಾನ್ನೂರು ಚರ್ಚಿನ ಉಪದ್ಯಕ್ಷರಾದ ಮೆಲ್ವಿನ್ ಡಿಸೊಜ, ಕಾರ್ಯದರ್ಶಿ ರೊನಾಲ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಫೋಕಸ್ ಸಂಸ್ಥೆಯ ಅದ್ಯಕ್ಷರಾದ ಪಿಯುಸ್ ಡಿಸೋಜ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ಡೆನಿಟಾ ಡಿಸೋಜ ವಂದಿಸಿದರು.  ಶ್ರಿ ಜೋನ್ ಡಿಸೋಜ ನಿರ್ವಹಿಸಿದರು.  ಕಾರ್ಯಕ್ರಮದಲ್ಲಿ ಫೋಕಸ್ ಸಂಸ್ಥೆಯ ನಿಕಟ ಪೂರ್ವ ಅದ್ಯಕ್ಷ್ ಪ್ರದೀಪ್ ಡಿಸೋಜ ಮಾಜಿ ಅದ್ಯಕ್ಷ್ ಮೌರಿಸ್ ಡಿಸೋಜ ಪ್ರಮುಖರಾದ ಫ್ರಾಂಕಿ ಕುಟಿನ್ಹೊ, ಸಿರಿಲ್ ಡಿಸೋಜ ಬಾಸಿಲ್ ರೊಡ್ರಿಗಸ್ ಸಂತೋಷ್ ಡಿಸೋಜ ರೋಶನ್ ಫೆರಾವೊ, ಮೆಲ್ವಿನ್ ಡಿಸೋಜ, ಶ್ರೀಮತಿ ಮೇರಿ ಉಪಸ್ಥಿತರಿದ್ದರು.

Notify of

eega dinapathrike odidare ajnana vrddiyaguthade aste pathrikegalu sullu suddiyannaste prakatisuthade