ದೀಪಕ್ ರಾವ್ ಕೊಲೆ ಪ್ರಕರಣ ; ಇನ್ನಿಬ್ಬರು ಆರೋಪಿಗಳ ಬಂಧನ

Spread the love

ದೀಪಕ್ ರಾವ್ ಕೊಲೆ ಪ್ರಕರಣ ; ಇನ್ನಿಬ್ಬರು ಆರೋಪಿಗಳ ಬಂಧನ

ಮಂಗಳೂರು: ಸುರತ್ಕಲ್ ಬಳಿಯ ಕಾಟಿಪಳ್ಳದ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧೀಸಿ ಪೋಲಿಸರು ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕಾಟಿಪಳ್ಳ ನಿವಾಸಿ  ಅಬ್ದುಲ್ ಅಜೀಝ್ (42), ಅಬ್ದುಲ್ ಅಜೀಮ್ (34) ಎಂದು ಗುರುತಿಸಲಾಗಿದೆ.

ಪ್ರಕರಣದಲ್ಲಿ ಈಗಾಗಲೇ ಮೊಹಮ್ಮದ್ ನೌಷಾದ್, ಮೊಹಮ್ಮದ್ ಇರ್ಷಾನ್, ಎಂಬವರನ್ನು ಬಂಧಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಈ ಪ್ರಕರಣದ ಇಬ್ಬರು ಆರೋಪಿತರಾದ ನವಾಸ್ ಪಿಂಕಿ, ರಿಜ್ವಾನ್ ಇಜ್ಜು @ ರಿಜ್ಜು ಆಸ್ಪತ್ರೆಗೆ ದಾಕಲಿಸಿದ್ದು ಚಿಕಿತ್ಸೆಯಲ್ಲಿರುತ್ತಾರೆ.

ಕಾರ್ಯಚರಣೆಯಲ್ಲಿ ಪಣಂಬೂರು ಪೋಲಿಸ್ ಠಾಣೆಯ ಪೋಲಿಸ್ ನಿರೀಕ್ಷಕರು ರಫೀಕ್ ಮತ್ತು ಸಿಬಂದಿಗಳು ಹಾಗೂ ಸಿಸಿಬಿ ಘಟಕದ ಪೋಲಿಸರ್ ನಿರೀಕ್ಷಕರಾದ ಶಾಂತರಾಮ್ ಮತ್ತು ಸಿಬಂದಿಗಳು ಭಾಗವಹಿಸಿದ್ದಾರೆ.


Spread the love