ದುಷ್ಕರ್ಮಿಗಳಿಂದ ಮೂವರಿಗೆ ಚೂರಿ ಇರಿತ

Spread the love

ದುಷ್ಕರ್ಮಿಗಳಿಂದ ಮೂವರಿಗೆ ಚೂರಿ ಇರಿತ

ಬಂಟ್ವಾಳ: ದುಷ್ಕರ್ಮಿಗಳ ತಂಡದಿಂದ ಮೂವರಿಗೆ ಚೂರಿ ಇರಿತ ಮಾಡಿದ ಬಂಟ್ವಾಳ ತಾಲೂಕಿನ ಬಿ.ಸಿ.ರೊಡ್ ಕೈಕಂಬದಲ್ಲಿ ನಡೆದಿದೆ.

ಚೂರಿ ಇರಿತಕ್ಕೆ ಒಳಗಾದವರನ್ನು ಅನ್ಸಾರ್, ಸಫ್ವಾನ್, ಫಯಾಝ್ ಎಂದು ಗುರುತಿಸಲಾಗಿದೆ

ಡಿಸೆಂಬರ್ 11 ರಂದು ರಾತ್ರಿ ಅನ್ಸಾರ್, ಹಾಗೂ ಆತನ ಸ್ನೇಹಿತರಾದ ಸಫಾನ್ ಹಾಗೂ ಫಯಾಜ್ ಹುಟ್ಟುಹಬ್ದದ ಆಚರಣೆಗೆಂದು ರಿಕ್ಷಾದಲ್ಲಿ ತೆರಳುತಿದ್ದು

ರಿಯಾನ್ ಎಂಬಾತ ರಿಕ್ಷಾದ ಒಳಗಿದ್ದು ಚಾಲಕನ ಸೀಟಿನ ಹಿಂಬದಿ ಗಾರ್ಡ ಮೇಲೆ ಕಾಲು ಮೇಲೆ ಹಾಕಿಕೊಂಡು ಕುಳಿತ್ತಿದ್ದು ಅದನ್ನು ಪಿರ್ಯಾದುದರರು ಇದು ನನ್ನ ದುಡಿಯುವ ರಿಕ್ಷಾ ಈ ರೀತಿ ಕೂರುವುದು ಸರಿಯಲ್ಲ ಎಂದು ಹೇಳಿದಾಗ ರಿಯಾನ್ ಪಿರ್ಯಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಮಾತಿನ ಚಕಮಕಿ ಆಗಿರುತ್ತದೆ.ನಂತರ ಅಲ್ಲಿಂದ ಕೋಪದಿಂದ ತೆರಳಿದ ರಿಯಾನ್ ಆತನ ಅಣ್ಣ ಇರ್ಫಾನ್ ಹಾಗೂ ಸಂಬಂದಿಕ ಸಾದಿಕ್ರೊಂದಿಗೆ ಬಂದು ನನಗೆ ರಿಯಾನ್ ಕೈಯಲ್ಲಿ ಹೊಡೆದಿದ್ದು, ಇರ್ಫಾನ್ ಎಂ.ಕೆ.ಟವರ್ ಬಳಿಯ ಹತ್ತಿರ ಇದ್ದ ನೋ.ಪಾರ್ಕಿಂಗ್ ಬೋರ್ಡ್ ನ್ನು ಬಿಸಾಕಿದ್ದು ನನ್ನ ತಲೆಗೆ ತಾಗಿ ರಕ್ತಗಾಯವಾಗಿರುತ್ತದೆ.ಬಿಡಿಸಲು ಬಂದ ಸ್ನೇಹಿತರಾದ ಸಫಾನ್ ಮತ್ತು ಫಯಾಜ್ ರಿಗೆ ಸಾದಿಕ್ ಚೂರಿಯಂತ ಹರಿತ ಆಯುಧದಿಂದ ಬೀಸಿದ್ದು ಫಯಾಜ್ ಗೆ ಎಡಗೈ ತೋಳಿಗೆ ಹಾಗೂ ಸಫಾನ್ ರಿಗೆ ಎಡಗಾಲು ತೊಡೆಗೆ ರಕ್ತಗಾಯವಾಗಿರುತ್ತದೆ .ನಂತರ ಅಲ್ಲಿಂದ ಮೂವರು ಓಡಿ ಹೋಗಿರುತ್ತಾರೆ.

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ


Spread the love