ದೆಹಲಿ ಕರ್ನಾಟಕ ಸಂಘದಲ್ಲಿ ಸ್ವತಂತ್ರ ದಿನಾಚರಣೆ

Spread the love

ದೆಹಲಿ ಕರ್ನಾಟಕ ಸಂಘದಲ್ಲಿ ಸ್ವತಂತ್ರ ದಿನಾಚರಣೆ
ದೆಹಲಿ: ದೆಹಲಿ ಕರ್ನಾಟಕ ಸಂಘ 70ನೇ ವರ್ಷದ ಸ್ವಾಂತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕನ್ನಡದ ಸಾಹಿತಿ ಹಾಗೂ ನಾಟಕಕಾರ ಕೆ.ವೈ.ನಾರಾಯಣ ಸ್ವಾಮಿ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಜಂಟೀ ನಿರ್ದೇಶಕ ಬಲವಂತ ರಾವ್ ಪಾಟೀಲ್, ನಿವೃತ್ತ ನ್ಯಾಯಮೂರ್ತಿ ಪಿ.ಎಸ್.ನಾರಾಯಣ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಧ್ವಜಾರೋಹಣ ಮಾಡಿದರು.

delhi-karnataka-sangah

ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜ, ಖಜಾಂಚಿ ಕೆ.ಎಸ್.ಜಿ. ಶೆಟ್ಟಿ, ಜಂಟೀ ಕಾರ್ಯದರ್ಶಿ ಶ್ರೀಮತಿ ಜಮುನಾ ಸಿ.ಮಠದ, ಸದಸ್ಯರುಗಳಾದ ಡಾ.ಎಂ.ಎಸ್.ಶಶಿಕುಮಾರ್, ಸಖಾರಾಮ ಉಪ್ಪೂರು, ಶ್ರೀಮತಿ ಪೂಜಾರಾವ್, ದೆಹಲಿಯ ಹಿರಿಯ ಕನ್ನಡಿಗ ಭೀಮರಾವ್ ಮುರಗೋಡ, ಶ್ರೀಮತಿ ಶಾಲನ ಮುರಗೋಡ, ಚೆನ್ನು ಎಸ್.ಮಠದ ಶಿವಾನಂದ ಇಂಗಳೇಶ್ವರ ಹಾಗೂ ಇನ್ನೂ ಅನೇಕ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಧ್ವಜಾರೋಹಣ ಹಾಗೂ ದೇಶಭಕ್ತಿ ಗೀತೆಗಳ ಜೊತೆಗೆ ರಾಷ್ಟ್ರಗೀತೆಯನ್ನು ಹಾಡಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕೆ.ವೈ.ನಾರಾಯಣ ಸ್ವಾಮಿ ಅವರು ದೇಶಕ್ಕೆ ಸ್ವತಂತ್ರ ಬಂದು 70 ವರ್ಷಗಳಾದರೂ ಇಂದಿಗೂ ಕೂಡಾ ಗ್ರಾಮಾಂತರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿರುವ ಕೋಟ್ಯಾಂತರ ಮಂದಿ ಭಾರತೀಯರಿಗೆ ಉಣಲು, ಉಡಲು ಹಾಗೂ ಮಳೆ ಬಿಸಿಲಿನಿಂದ ಕಾಪಾಡಿಕೊಳ್ಳಲು ಬೇಕಾಗುವ ಸೂರಿನ ಕೊರತೆಯಿರುವುದು ದುರಾದೃಷ್ಟಕರ. ಎಂದಿನವರೆಗೆ ಎಲ್ಲರಿಗೂ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಆತ್ಮಗೌರವ ದೊರೆಯುವುದಿಲ್ಲವೋ, ಜನ ಬಡತನದಿಂದ ಮುಕ್ತರಾಗಿ ನೆಮ್ಮದಿ ಹಾಗೂ ಗೌರವಯುತವಾದ ಜೀವನವನ್ನು ನಡೆಸುವಂತಾಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಸ್ವಾತಂತ್ರಕ್ಕೆ ಯಾವುದೇ ಅರ್ಥವಿಲ್ಲ ಎಂದು ನುಡಿದರು.

ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಜಂಟೀ ನಿರ್ದೇಶಕರಾದ ಶ್ರೀ ಬಲವಂತರಾವ್ ಪಾಟೀಲ್ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಇತರ ಗಣ್ಯರು ಸಹ ಈ ಸಂದರ್ಭದಲ್ಲಿ ಸ್ವಾಂತ್ರ್ಯದ ಮಹತ್ವ, ದೇಶದ ಸ್ಥಿತಿಗತಿ, ಗಡಿ ಪ್ರದೇಶದಲ್ಲಿ ಸೈನಿಕರು ಎದುರಿಸುತ್ತಿರುವ ಸಮಸ್ಯೆಗಳು, ಸಾಮಾಜಿಕ ನ್ಯಾಯ ಸಮಾನತೆ, ಸ್ತ್ರೀ ಸ್ವಾತಂತ್ರ್ಯ ಯುವ ಶಕ್ತಿಯ ಸದ್ವಿನಿಯೋಗದ ಇನ್ನಿತರೆ ವಿಷಯಗಳ ಕುರಿತಾಗಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ನೆರೆದಿದ್ದ ಎಲ್ಲರಿಗೂ ಸಿಹಿತಿಂಡಿ ಹಾಗೂ ಬೆಳಗಿನ ಉಪಹಾರವನ್ನು ನೀಡಲಾಯಿತು.


Spread the love