ದೇವಸ್ಥಾನದ ಪ್ಲೆಕ್ಸ್ ತೆಗೆಯೋರಿಗೆ ಕಾಂಗ್ರೆಸಿಗರ ಪ್ಲೆಕ್ಸ್ ಯಾಕೆ ಕಾಣಲ್ಲ? – ವೇದವ್ಯಾಸ ಕಾಮತ್
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿಪಾರ್ಕ್, ಲೇಡಿಹಿಲ್ ಸೇರಿದಂತೆ ಬಹುತೇಕ ಭಾಗದಲ್ಲಿ ಕಾಂಗ್ರೆಸ್ ನಾಯಕರ ಸೂಚನೆಯಂತೆ ಕೆಲವು ಕಡೆಗಳಲ್ಲಿ ಮಾತ್ರ ಗೂಡಂಗಡಿ ತೆರವು ಮಾಡಿದ್ದಾರೆ. ಹಾಗೆಯೇ, ಕಾಂಗ್ರೆಸ್ ನಾಯಕರು ಪ್ಲೆಕ್ಸ್ ಹಾಕಿದರೆ ತೆಗೆಯಲ್ಲ. ಇತರೇ ದೇವಸ್ಥಾನ ಕಮಿಟಿಯವರು, ಬಿಜೆಪಿಗರ ಪ್ಲೆಕ್ಸ್ ತೆರವು ಮಾಡುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಒಂದು ಕಣ್ಣಿಗೆ ಸುಣ್ಣ, ಇನ್ನೊಂದಕ್ಕೆ ಬೆಣ್ಣೆ ಅನ್ನುವ ರೀತಿ ಮಾಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿಪಾರ್ಕ್, ಲೇಡಿಹಿಲ್ ಸೇರಿದಂತೆ ಬಹುತೇಕ ಭಾಗದಲ್ಲಿ ಕಾಂಗ್ರೆಸ್ ನಾಯಕರ ಸೂಚನೆಯಂತೆ ಕೆಲವು ಕಡೆಗಳಲ್ಲಿ ಮಾತ್ರ ಗೂಡಂಗಡಿ ತೆರವು ಮಾಡಿದ್ದಾರೆ. ಹಾಗೆಯೇ, ಕಾಂಗ್ರೆಸ್ ನಾಯಕರು ಪ್ಲೆಕ್ಸ್ ಹಾಕಿದರೆ ತೆಗೆಯಲ್ಲ. ಇತರೇ ದೇವಸ್ಥಾನ ಕಮಿಟಿಯವರು, ಬಿಜೆಪಿಗರ ಪ್ಲೆಕ್ಸ್ ತೆರವು ಮಾಡುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಒಂದು ಕಣ್ಣಿಗೆ ಸುಣ್ಣ, ಇನ್ನೊಂದಕ್ಕೆ ಬೆಣ್ಣೆ ಅನ್ನುವ ರೀತಿ ಮಾಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿ ನಡೆಸಿದ ಅವರು, ಪ್ಲೆಕ್ಸ್, ಗೂಡಂಗಡಿ ತೆರವು ಮಾಡವುದಿದ್ದರೆ ಎಲ್ಲವನ್ನೂ ತೆರವುಗೊಳಿಸಿ. ಅದು ಬಿಟ್ಟು ದುಡಿದು ತಿನ್ನುವ ಬಡ ವ್ಯಾಪಾರಿಗಳ ಮಧ್ಯೆಯೂ ಯಾಕೆ ತಾರತಮ್ಯ? ರಾಜ್ಯ ಕಾಂಗ್ರೆಸ್ ಸರ್ಕಾರದ ಮೂಲಕ ಆಡಳಿತ ನಡೆಯುತ್ತಿದ್ದು ಪಕ್ಷದ ನಾಯಕರ ಅಣತಿಯ ವರ್ತಿಸುತ್ತಿದ್ದಾರೆ. ಮೊನ್ನೆ ಮುಖ್ಯಮಂತ್ರಿ ಬಂದಾಗ ಎಲ್ಲ ಕಡೆ ಪ್ಲೆಕ್ಸ್ ರಾರಾಜಿಸಿದ್ದವು. ಪಾಲಿಕೆ ನಿಷೇಧ ವಿಧಿಸಿದ ಬಳಿಕ ಬಿಜೆಪಿ ವತಿಯಿಂದ ಪ್ಲೆಕ್ಸ್ ಹಾಕಿಯೇ ಇಲ್ಲ. ಈಗ ಉರ್ವ ದೇವಸ್ಥಾನದಲ್ಲಿ ದೊಡ್ಡ ಕಾರ್ಯಕ್ರಮ ಆಗುತ್ತಿದ್ದು ಅವರು ಹಾಕಿದ್ದ ಪ್ಲೆಕ್ಸ್ ಕಿತ್ತುಕೊಂಡು ಹೋಗಿದ್ದಾರೆ. ಇದೇ ವೇಳೆ, ಜನರ ವಿರೋಧದ ಮಧ್ಯೆಯೂ ಕದ್ರಿ ಪಾರ್ಕ್ ನಲ್ಲಿ ಪಾರ್ಕಿಂಗ್ ಶುಲ್ಕ ಆರಂಭಿಸಲಾಗಿದೆ. ಎಲ್ಲ ಜನವಿರೋಧಿ ನಡೆಯ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಕಾಮತ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಂಡಲದ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ ಲಲ್ಲೇಶ್ ಕುಮಾರ್, ಭಾಸ್ಕರಚಂದ್ರ ಶೆಟ್ಟಿ, ಉಪಸ್ಥಿತರಿದ್ದರು.













