ದೊಡ್ಡಣಗುಡ್ಡೆ : ಎರಡು ದಿನಗಳ ಹಲಸು ಮೇಳಕ್ಕೆ ಚಾಲನೆ

Spread the love

ದೊಡ್ಡಣಗುಡ್ಡೆ : ಎರಡು ದಿನಗಳ ಹಲಸು ಮೇಳಕ್ಕೆ ಚಾಲನೆ

ಉಡುಪಿ: ಅಂಜನ್ ಕನ್ಸ್ಸ್ಟ್ರಕ್ಷನ್ ವತಿಯಿಂದ ದೊಡ್ಡಣಗುಡ್ಡೆ ತೋಟಗಾರಿಕೆ ಇಲಾಖೆ, ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾದ ಹಲಸು ಮೇಳಕ್ಕೆ ಚಾಲನೆ ನೀಡಲಾಯಿತು.

ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೇರಾ ಹಲಸು ಮೇಳವನ್ನು ಉದ್ಘಾಟಿಸಿ ಶುಭಹಾರೈಸಿದರು.

ಚಂದ್ರ ಹಲಸು, ಏಕಾದಶಿ, ರುದ್ರಾಕ್ಷಿ ಮುಂತಾದ ಸಿಹಿ ಹಾಗೂ ರುಚಿಕರ ವಾದ ಹಲಸಿನ ಹಣ್ಣು ಮೇಳದಲ್ಲಿದ್ದು, ಹಲಸಿನ ಖಾದ್ಯ ಹೋಳಿಗೆ, ಪತ್ರೋಡೆ, ಹಲ್ವ, ಮುಳ್ಯ ಗಟ್ಟಿ, ಜ್ಯೂಸ್, ಐಸ್ಕ್ರೀಂ, ವೈವಿಧ್ಯಮಯ ಸ್ವಾದವುಳ್ಳ ಉತ್ಪನ್ನ ಗಳನ್ನು ತಯಾರಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ.

ಅಲ್ಲದೆ ಮಾವು ಹಾಗೂ ಇತರ ಮಳಿಗೆಗಳು ಇದ್ದು, ತುಮಕೂರು, ದಾವಣಗೆರೆ, ಉಡುಪಿ ಸಹಿತ ಹಲವು ಜಿಲ್ಲೆಗಳ ರೈತರು ಮತ್ತು ಹಲಸು, ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ 60ಕ್ಕೂ ಅಧಿಕ ಮಳಿಗೆಗಳಿವೆ.

ಕಾರ್ಯಕ್ರಮದಲ್ಲಿ ಶೈಲಾ ಪೈ, ಅಕ್ಷತ್ ಪೈ, ತಕ್ಷತ್ ಪೈ, ಸಂದೀಪ್ ಅಲೆವೂರು, ಶ್ರೀಕಾಂತ್ ಅಲೆವೂರು,ಸೂರಜ್ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.


Spread the love

Leave a Reply