ದ್ವಿತೀಯ ಪಿಯು ಫಲಿತಾಂಶ ಏಪ್ರಿಲ್ 15 ಕ್ಕೆ

ದ್ವಿತೀಯ ಪಿಯು ಫಲಿತಾಂಶ ಏಪ್ರಿಲ್ 15 ಕ್ಕೆ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಇದೇ 15 ರಂದು (ಸೋಮವಾರ) ಪ್ರಕಟಗೊಳ್ಳಲಿದೆ.

ಸೋಮವಾರ ಬೆಳಿಗ್ಗೆ 11 ಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಫಲಿತಾಂಶ ಪ್ರಕಟಿಸುವುದರ ಜೊತೆಗೆ ಫಲಿತಾಂಶವನ್ನು ಮಧ್ಯಾಹ್ನ 12 ಗಂಟೆಗೆ ವೆಬ್‌ಸೈಟ್‌ಗೆ ಅಪ್‌ ಲೋಡ್‌ ಮಾಡಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

ಏಪ್ರಿಲ್ 15 ( ಸೋಮವಾರ) ಬೆಳಗ್ಗೆ 11ಗಂಟೆಗೆ pue.kar.nic.in ಹಾಗೂ karresults.nic.in ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಏ.17 ಮತ್ತು 19ರಂದು ಸರಕಾರಿ ರಜೆಯಿದ್ದು ಏ.18ರಂದು ಲೋಕಸಭಾ ಚುನಾವಣೆ ನಡೆಯಲಿದೆ. ಹಾಗಾಗಿ ಏ.16ರಂದೇ ಫಲಿತಾಂಶ ಪ್ರಕಟಿಸುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.