ದ.ಕ.ಜಿಲ್ಲಾ ಎನ್ ಎಸ್ ಯುಐ ಅಧ್ಯಕ್ಷರಾಗಿ ಸವಾದ್ ಸುಳ್ಯ ನೇಮಕ

Spread the love

ದ.ಕ.ಜಿಲ್ಲಾ ಎನ್ ಎಸ್ ಯುಐ ಅಧ್ಯಕ್ಷರಾಗಿ ಸವಾದ್ ಸುಳ್ಯ ನೇಮಕ

ಮಂಗಳೂರು: ಎನ್ ಎಸ್ ಯುಐ ದ.ಕ. ಜಿಲ್ಲಾ ನೂತನ ಅಧ್ಯಕ್ಷರಾಗಿ ಸವಾದ್ ಸುಳ್ಯ ಅವರನ್ನು ನೇಮಕಗೊಳಿಸಿ ಕೂಡಲೇ ಜಾರಿಗೆ ಬರುವಂತೆ ರಾಷ್ಟ್ರೀಯ ಎನ್ ಎಸ್ ಯುಐ ಕಾರ್ಯದರ್ಶಿ ಎರಿಕ್ ಸ್ಟೀಫನ್ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

ಸುಳ್ಯದ ಉದ್ಯಮಿ ನಾವೂರು ಅಬೂಬಕ್ಕರ್ ಮತ್ತು ಮೈಮೂನ ದಂಪತಿಯ ಪುತ್ರರಾಗಿರುವ ಮಹಮ್ಮದ್ ಸವಾದ್ ಅವರು ವಿಧ್ಯಾರ್ಥಿ ದೆಸೆಯಿಂದಲೇ ಸಂಘಟನೆ ಮತ್ತು ವಿಧ್ಯಾರ್ಥಿಗಳ ಪರ ಹೋರಾಟದ ಮುಂಚೂಣಿಯಲ್ಲಿದ್ದುಕೊಂಡು ಬಂದವರು. ಪ್ರೌಢ ಶಾಲೆಯಲ್ಲಿರುವಾಗಲೇ ಎನ್ ಎಸ್ ಯುಐ ವಿದ್ಯಾರ್ಥಿ ನಾಯಕನಾಗಿ, ಕಾಲೇಜು ಘಟಕದ ಅಧ್ಯಕ್ಷನಾಗಿ, ಸುಳ್ಯ ನಗರ ಅಧ್ಯಕ್ಷನಾಗಿ, ಜಿಲ್ಲಾ ಸಂಯೋಜಕನಾಗಿ, ರಾಜ್ಯ ಚುನಾಯಿತ ಕಾರ್ಯದರ್ಶಿಯಾಗಿ, ಪ್ರಸ್ತುತ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಧ್ಯಾರ್ಥಿಗಳ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಅವರು, ಸಾಮಾಜಿಕ ಸಂಘಟನೆಯಲ್ಲಿ ತನ್ನ ಛಾಪನ್ನು ಮೂಡಿಸಿದ್ದಾರೆ. ಕೋರೋನಾ ವಾರಿಯರ್ಸ್ ಆಗಿ ಕೆಲಸ ಮಾಡಿರುವ ಅವರು, ಡ್ರಗ್ಸ್ ವಿರುದ್ಧ ಜಿಲ್ಲಾದ್ಯಂತ ಅಭಿಯಾನವನ್ನು ಕೂಡ ಮಾಡಿದ್ದಾರೆ. ಅಲ್ಲದೆ. ಎನ್ ಎಸ್ ಯುಐ ಆಯೋಜಿಸಿದ ರಾಷ್ಟ್ರೀಯ ಮತ್ತು ರಾಜ್ಯ ಶಿಬಿರಗಳಲ್ಲಿ ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಿದ್ದರು.


Spread the love