ದ.ಕ. ಜಿಲ್ಲಾ ಭಾ.28-05-2018 ರ ಸ್ವಯಂಪ್ರೇರಿತ ಬಂದ್ ಗೆ ದ.ಕ. ಜಿಲ್ಲಾ ಬಿಜೆಪಿ ಮನವಿ

Spread the love

28-05-2018 ರ ಸ್ವಯಂಪ್ರೇರಿತ ಬಂದ್ ಗೆ ದ.ಕ. ಜಿಲ್ಲಾ ಬಿಜೆಪಿ ಮನವಿ

ಮಂಗಳೂರು: ರಾಜ್ಯದಲ್ಲಿ ಸರಕಾರ ಬಂದು ರಾಜ್ಯದಲ್ಲಿ ರೈತರು ಸಹಕಾರಿ ಸಂಘಗಳಲ್ಲಿ. ರಾಷ್ಟ್ರಿಕ್ರತ ಬ್ಯಾಂಕ್ ಗಳಲ್ಲಿ, ಖಾಸಗಿ ಸಾಲ ಮಾಡಿರುವ ಸುಮಾರು 53000 ಕೋಟಿ ರುಪಾಯಿಯನ್ನು ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ಮನ್ನಾ ಮಾಡುತ್ತೆನೆ ಎಂದು ಪ್ರಾಣಾಳಿಕೆಯಲ್ಲಿ ವಾಗ್ಧಾನ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಾಲ ಮನ್ನಾ ಮಾಡದೆ ಸಮ್ಮಿಶ್ರ ಸರಾಕಾರ ಎಂದು ಕಾರಣ ಕೊಟ್ಟು ರೈತರ ಸಾಲ ಮನ್ನಾ ಮಾಡಲು ಮೀನಮೇಷ ಎನಿಸುತ್ತಿರುವುದನ್ನು ವಿರೋದಿಸಿ ಕರ್ನಾಟಕ ರಾಜ್ಯದ ರೈತರು ನೀಡಿದ ಕರ್ನಾಟಕ ರಾಜ್ಯ ಬಂದ್ ಕರೆಗೆ ದ.ಕ. ಜಿಲ್ಲಾ ಭಾ.ಜ.ಪ. ವು ರಾಜ್ಯದ ಸೂಚನೆಯಂತೆ ಪೂರ್ಣ ಬೆಂಬಲವನ್ನು ಘೋಷಿಸುತ್ತದೆ. ಆದುದರಿಂದ ಜಿಲ್ಲಾದ್ಯಂತ ಸ್ವಯಂ ಪ್ರೇರಿತರಾಗಿ ಶಾಂತಿಯುತವಾಗಿ ಬಂದ್ ಆಚರಿಸಬೇಕಾಗಿ ಜಿಲ್ಲಾದ್ಯಕ್ಷರಾದ  ಸಂಜೀವ ಮಠಂದೂರುರವರು ವಿನಂತಿಸಿದ್ದಾರೆ.


Spread the love