ಧರ್ಮಸ್ಥಳ ಮಹಾಮಸ್ತಕಾಭೀಷೇಕ ಕಾರ್ಯಕ್ರಮದ ಪೆಂಡಾಲ್ ಕುಸಿದು ಹಲವರಿಗೆ ಗಾಯ

Spread the love

ಧರ್ಮಸ್ಥಳ ಮಹಾಮಸ್ತಕಾಭೀಷೇಕ ಕಾರ್ಯಕ್ರಮದ ಪೆಂಡಾಲ್ ಕುಸಿದು ಹಲವರಿಗೆ ಗಾಯ

ಧರ್ಮಸ್ಥಳ : ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕಕ್ಕೆ ನಿರ್ಮಿಸಿದ ಬೃಹತ್ ಚಪ್ಪರ ನೆಲಕ್ಕುರುಳಿದ ರಭಸದಲ್ಲಿ ಒಳಗಿದ ಹಲವಾರು ಮಂದಿ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಮಸ್ತಾಕಾಭೀಷೆಕ ಕಾರ್ಯಕ್ರಮದ ಪ್ರಯುಕ್ತ ಪಂಚ ಮಹಾವೈಭವ ನಡೆಯುತ್ತಿದ್ದ ವೇದಿಕೆಗೆ ಹಾಕಿದ್ದ ಪೆಂಡಾಲ್ ಕುಸಿದು ಬಿದ್ದು ಈ ಘಟನೆ ಸಂಭವಿಸಿದ್ದು ಪೆಂಡಾಲ್ ಅಡಿಯಲ್ಲಿ ಹಲವರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳೀಯ ಸ್ವಯಂ ಸೇವಕರು ಮತ್ತು ಅಗ್ನಿಶಾಮಕ ಸಿಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಗುರುವಾರ ಮಧ್ಯಾಹ್ನದ ಸುಮಾರಿಗೆ ತಗಡು ಶೀಟುಗಳಿಂದ ನಿರ್ಮಿಸಲಾಗಿದ್ದ ಈ ಪೆಂಡಾಲಿನ ಬಹುಭಾಗ ಕುಸಿದು ಬಿತ್ತು ಎನ್ನಲಾಗಿದೆ.


Spread the love