ಧರ್ಮಹಾನಿಯನ್ನು ತಡೆಯುವುದಕ್ಕಾಗಿ ಸಂಘಟಿತರಾಗಿ ಕಾರ್ಯ ಮಾಡುವುದು ಅವಶ್ಯಕವಿದೆ – ಚಂದ್ರ ಮೊಗೇರ

Spread the love

ಧರ್ಮಹಾನಿಯನ್ನು ತಡೆಯುವುದಕ್ಕಾಗಿ ಸಂಘಟಿತರಾಗಿ ಕಾರ್ಯ ಮಾಡುವುದು ಅವಶ್ಯಕವಿದೆ – ಚಂದ್ರ ಮೊಗೇರ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸಾರ್ವಜನಿಕ ಉತ್ಸವ ಮಂಡಳಿಗಳು ಆದರ್ಶ ರೀತಿಯಲ್ಲಿ ಹೇಗೆ ಉತ್ಸವಗಳನ್ನು ಆಚರಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುವುದಕ್ಕಾಗಿ ಮಹಾನಗರದ ರಥಬೀದಿಯಲ್ಲಿರುವ ಬಾಳಂಭಟ್ ಹಾಲ್ ನಲ್ಲಿ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಅನೇಕ ಗಣೇಶೋತ್ಸವ ಮಂಡಳಿಗಳು ಶಾರದೋತ್ಸವ ಮಂಡಳಿಗಳು ಕೃಷ್ಣ ಜನ್ಮಾಷ್ಟಮಿ ಆಚರಿಸುವ ಮಂಡಳಿಗಳು ಉಪಸ್ಥಿತರಿದ್ದರು.

ಶಂಖನಾದದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಉಡುಪಿಯ ನ್ಯಾಯವಾದಿಗಳಾದ ದಿನೇಶ್ ನಾಯ್ಕ್ ಇವರು ದೀಪಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾರ್ವಜನಿಕ ಉತ್ಸವಗಳ ಹಿಂದಿನ ಉದ್ದೇಶದ ಬಗ್ಗೆ ವಿವೇಕ್ ಪೈ ಇವರು ಮಾರ್ಗದರ್ಶನವನ್ನು ಮಾಡಿದರು. ಆದರ್ಶ ರೀತಿಯಲ್ಲಿ ಗಣೇಶೋತ್ಸವನ್ನು ಹೇಗೆ ಆಚರಿಸಬೇಕು ಎಂಬುದರ ವಿವರವಾದ ಮಾಹಿತಿಯನ್ನು ಸನಾತನ ಸಂಸ್ಥೆಯ ದ.ಕ. ಜಿಲ್ಲಾ ಸೇವಕರಾದ ಸೌ. ಮಂಜುಳಾ ಗೌಡ ಇವರು ನೀಡಿದರು.

ಪ್ರಸ್ತುತ ಸರ್ಕಾರ ಮತ್ತು ಪೊಲೀಸರಿಂದ ಯಾವ ರೀತಿಯಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಅಡಚಣೆಗಳು ಬರುತ್ತವೆ ಅದಕ್ಕೆ ಕಾನೂನಿನ ಮೂಲಕ ಸಂಘಟಿತವಾಗಿ ಎಲ್ಲಾ ಮಂಡಳಿಗಳು ಕಾನೂನಿನ ಮೂಲಕ ಹೇಗೆ ಮಾಡಬಹುದು ಹಾಗೆಯೇ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಸಾರ್ವಜನಿಕ ಉತ್ಸವ ಮಂಡಳಿಗಳ ಪಾತ್ರವೇನು ಮತ್ತು ಅದನ್ನು ಸಾರ್ವಜನಿಕ ಉತ್ಸವ ಮಂಡಳಿಗಳು ಹೇಗೆ ನಿಭಾಯಿಸಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ಎಂಬುದರ ಮಾಹಿತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕರಾದ ಚಂದ್ರ ಮೊಗೇರ ಅವರು ವಿವರಿಸಿದರು. ಅಷ್ಟೇ ಅಲ್ಲದೆ ಈ ಕಾರ್ಯಕ್ರಮದಲ್ಲಿ ಪ್ರಸ್ತುತ ಗಣೇಶೋತ್ಸವದಲ್ಲಿ ನಡೆಯುತ್ತಿರುವ ಧರ್ಮಹಾನಿಯನ್ನು ತಡೆಯುವುದರಲ್ಲಿ ನನ್ನ ಪಾಲೇನು ಈ ವಿಷಯದ ಬಗ್ಗೆ ಗುಂಪು ಚರ್ಚೆಯನ್ನು ಮಾಡಲಾಯಿತು ಕೊನೆಯಲ್ಲಿ ಶ್ಲೋಕದೊಂದಿಗೆ ಕಾರ್ಯಕ್ರಮದ ಮುಕ್ತಾಯ ಮಾಡಲಾಯಿತು ಕಾರ್ಯಕ್ರಮದ ಸೂತ್ರ ಸಂಚಾಲನೆಯನ್ನು ಮಧು ಇವರು ಮಾಡಿದರು.

ವಿವೇಕ್ ಪೈ ಮಾತನಾಡುತ್ತಾ, 1894 ರಲ್ಲಿ ಬಾಲಗಂಗಾಧರ ತಿಲಕರು ಪುಣೆಯಲ್ಲಿ ಮಹಾಗಣಪತಿ ದೇವರನ್ನು ಪ್ರತಿಷ್ಠಾಪಿಸಿ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದರು. ಇದರ ಉದ್ದೇಶವೆಂದರೆ ಧರ್ಮರಕ್ಷಣೆ, ಹಿಂದೂ ಸಂಘಟನೆ ಮತ್ತು ಸಮಾಜದ ಜನರನ್ನು ಒಗ್ಗೂಡಿಸಿ ಸಂಘಟಿತವಾಗಿ ಸ್ವಾತಂತ್ರ್ಯ ಹೋರಾಟದ ಕಾರ್ಯ ಮಾಡುವುದಾಗಿತ್ತು.

ಹಿಂದೂ ಜನಜಾಗೃತಿ ಸಮಿತಿಯ ಚಂದ್ರ ಮೊಗೇರ ಇವರು ಮಾತನಾಡುತ್ತಾ, ಎಲ್ಲಾ ಸಾರ್ವಜನಿಕ ಉತ್ಸವ ಮಂಡಳಿಗಳು ಧರ್ಮಹಾನಿಯನ್ನು ತಡೆಯುವುದಕ್ಕಾಗಿ ಸಂಘಟಿತವಾಗುವುದು ಅವಶ್ಯಕವಿದೆ. ಝಾಕೀರ್ ನಾಯಕ್ ಗಣೇಶನ ಅಪಮಾನವನ್ನು ಮಾಡಿದ ಸಂದರ್ಭದಲ್ಲಿ ಹಿಂದೂ ಸಂಘಟಿತವಾಗಿ ಹೋರಾಡಿದ ಪರಿಣಾಮ ಈ ದೇಶವನ್ನು ಬಿಟ್ಟು ಹೊರಗೆ ಹೋಗಬೇಕಾಯಿತು ಇದು ಸಂಘಟಿತವಾಗಿ ಹೋರಾಟ ಮಾಡಿದರೆ ಪರಿಣಾಮ ಇಂದು ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಅನುಮತಿಗಾಗಿ ಮತ್ತು ಧ್ವನಿವರ್ಧಕ ಪರವಾನಿಗೆಗಾಗಿ ಅಲೆದಾಡಬೇಕಾದ ಪರಿಸ್ಥಿತಿ ಇದೆ ಆದರೆ ಮುನ್ನೂರರುವತ್ತು ದಿನ ಮಸೀದಿಗಳಿಂದ ಆಗುತ್ತಿರುವ ಶಬ್ದ ಮಾಲಿನ್ಯದ ಬಗ್ಗೆ ಯಾವುದೇ ಸರ್ಕಾರ ಅಥವಾ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುವುದಿಲ್ಲ; ಕೇವಲ ಹಿಂದೂಗಳ ಮೇಲೆ ಮಾತ್ರ ಅಥವಾ ಹಿಂದೂ ಉತ್ಸವಗಳಗಳಿಗೆ ನಿರ್ಬಂಧ ಹಾಕಲಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವುದಕ್ಕಾಗಿ ಪ್ರತಿಯೊಂದು ಗಣೇಶೋತ್ಸವ ಮಂಡಳಿಗಳು ಸಂಘಟಿತರಾಗಬೇಕಾಗಿದೆ, ಎಂದು ತಿಳಿಸಿದರು.


Spread the love