ಧರ್ಮ ಸಂಸದ್ ಶಾಂತಿಯುತವಾಗಿ ಸಂಪನ್ನಗೊಳ್ಳಲು ಸಹಕರಿಸಿದ ಎಸ್ಪಿಗೆ ಉಪ್ಪಾ ಅಭಿನಂದನೆ

Spread the love

ಧರ್ಮ ಸಂಸದ್ ಶಾಂತಿಯುತವಾಗಿ ಸಂಪನ್ನಗೊಳ್ಳಲು ಸಹಕರಿಸಿದ ಎಸ್ಪಿಗೆ ಉಪ್ಪಾ ಅಭಿನಂದನೆ

ಉಡುಪಿ: ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಮತ್ತು ಹಿಂದೂ ಸಮಾಜೋತ್ಸವವನ್ನು ಅತ್ಯಂತ ಶಾಂತಿಯುತವಾಗಿ ಸಂಪನ್ನಗೊಳ್ಳಲು ಸಂಪೂರ್ಣವಾಗಿ ಸಹಕರಿಸಿದ ಜಿಲ್ಲಾ ಫೋಲಿಸ್ ಅಧೀಕ್ಷಕ ಡಾ .ಸಂಜೀವ್ ಎಂ. ಪಾಟೀಲ್ ಹಾಗೂ ಅವರ ತಂಡವನ್ನು ಉಡುಪಿ ಪ್ರೆಸ್ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಅಭಿನಂದಿಸಲಾಯಿತು.

ಉಪ್ಪಾ ಅಧ್ಯಕ್ಷ ಜನಾರ್ದನ್ ಕೊಡವೂರು, ಕೋಶಾಧಿಕಾರಿ ಆಸ್ಟ್ರೊ ಮೋಹನ್ ಕಾರ್ಯದರ್ಶಿ ಗಣೇಶ್ ಕಲ್ಲ್ಯಾಣಪುರ್, ಸದಸ್ಯರಾದ ಅನಂತ್ ಭಾಗವತ್ , ಸುರಭಿ ರತನ್ , ರಂಜಿತ್ ಕೊಡವೂರು, ರೋಟರಿ ಜಿಲ್ಲೆ 3182ರ ಮಹಿಳಾ ಸದಸ್ಯತ್ವ ಅಭಿಯಾನದ ಮುಖ್ಯಸ್ಥರಾದ ಪೂರ್ಣಿಮಾ ಜನಾರ್ಧನ್ ಮತ್ತಿತರರು ಉಪಸ್ಥಿತರಿದ್ದರು.


Spread the love