ನಂತೂರ್ ಸರ್ಕಲ್ ಬಳಿ ಬೈಕಿಗೆ ಟ್ಯಾಂಕರ್ ಢಿಕ್ಕಿ; ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

ನಂತೂರ್ ಸರ್ಕಲ್ ಬಳಿ ಬೈಕಿಗೆ ಟ್ಯಾಂಕರ್ ಢಿಕ್ಕಿ; ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

ಮಂಗಳೂರು: ಮಂಗಳೂರು ನಗರದ ನಂತೂರ್ ಸರ್ಕಲ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತ ಬೈಕ್ ಸವಾರನನ್ನು ಮಣ್ಣಗುಡ್ಡೆ ನಿವಾಸಿ, ನಗರದ ಬೆಸೆಂಟ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಕಾರ್ತಿಕ್ ಮಲ್ಯ ಎಂದು ಗುರುತಿಸಲಾಗಿದೆ.

ಕಾರ್ತಿಕ್ ಸುರತ್ಕಲ್ ಕಡೆಯಿಂದ ನಂತೂರ್ ಸರ್ಕಲ್ ಬಳಿ ಬರುತ್ತಿದ್ದಂತೆ ಈ ಅಪಘಾತ ಸಂಭವಿಸಿದೆ.

ಕಾರ್ತಿಕ್ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದು ನಗರದ ಹೆಸರಾಂತ ಕಾಲೇಜಿನಲ್ಲಿ ಓದುತ್ತಿದ್ದ.