ನಕಲಿ ಮತದಾನಕ್ಕೆ ಯತ್ನ ಆರೋಪಿ ಸೆರೆ

ನಕಲಿ ಮತದಾನಕ್ಕೆ ಯತ್ನ ಆರೋಪಿ ಸೆರೆ

ಬಂಟ್ವಾಳ: ನಕಲಿ ಮತದಾನಕ್ಕೆ ಯತ್ನಿಸಿದ ಆರೋಪದಡಿ ಯುವಕನೋರ್ವನನ್ನು ಬಂಟ್ವಾಳ ನಗರ ಪೊಲೀಸರು ಬಂಧೀಸಿದ್ದಾರೆ.

ಬಂಧಿತನನ್ನು ಕಲ್ಲಡ್ಕ ಗೋಳ್ತಮಜಲು ನಿವಾಸಿ ಮಹಮ್ಮದ್ ಶಾಫಿ (23) ಎಂದು ಗುರುತಿಸಲಾಗಿದೆ.

ಮಹಮ್ಮದ್ ಶಾಫಿ ಗುರುವಾರ ಮಜೀದ್ ರಹಿಮಾನ್ ಎಂಬ ಹೆಸರಿನಲ್ಲಿ ಆಧಾರ್ ಕಾರ್ಡನ್ನು ಹಾಜರುಪಡಿಸಿ ಮತದಾನ ಮಾಡಲು ಯತ್ನಿಸಿದ ವೇಳ ಬೂತ್ ನಲ್ಲಿದ್ದ ಏಜೆಂಟ್ ಜಯರಾಮ್ ಗೌಡ ಅವರು ಈನತನ ಮಜೀದ್ ರಹೀಮಾನ್ ಅಲ್ಲ ಈತನ ಹೆಸರು ಮಹಮ್ಮದ್ ಶಾಫಿ ಎಂದು ತಿಳಿಸಿದ್ದು ಈತನು ಮತ್ತೊಬ್ಬರ ಹೆಸರಿನಲ್ಲಿ ಮತ ಚಲಾಯಿಸಲು ಬಂದಿದ್ದು ಈತನು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದು ಆತನನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.