ನಗರಸಭಾ ಸದಸ್ಯ ರಮೇಶ್ ಕಾಂಚನ್ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರಿಗೆ, ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

Spread the love

ನಗರಸಭಾ ಸದಸ್ಯ ರಮೇಶ್ ಕಾಂಚನ್ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರಿಗೆ, ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

ಉಡುಪಿ: 31ನೇ ಬೈಲೂರು ವಾರ್ಡಿನ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್ರವರ ವಿಶೇಷ ಮುತುವರ್ಜಿಯಿಂದ ಉಡುಪಿ ನಗರಸಭೆಯ ಪರ್ಕಳ ಹಾಗೂ ಶೆಟ್ಟಿಬೆಟ್ಟು ವಾರ್ಡಿನ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಹಾಗೂ ಸ್ಥಳೀಯರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಕಾರ್ಯಕ್ರಮವು ಪರ್ಕಳ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಯಕ್ಷಗಾನ ಕಲಾಮಂದಿರದಲ್ಲಿ ಜರಗಿತು.

ಕಿಟ್ ನಲ್ಲಿ 10 ಕೆಜಿ ಅಕ್ಕಿ ಸೇರಿದಂತೆ ಹಿಟ್ಟು, ಬೇಳೆ, ಸಕ್ಕರೆ ಹಾಗೂ ಇತರ ದಿನಸಿ ಸಾಮಾಗ್ರಿಗಳು ಒಳಗೊಂಡಿವೆ.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ಸುಕೇಶ್ ಕುಂದರ್, ಮುರಳಿಧರ್ ನಕ್ಷತ್ರಿ, ಪ್ರಸಾದ್ ರೈ, ಮಧುಸೂದನ್, ರಾಜೇಶ್ ಅಮೀನ್, ಮೋಹನದಾಸ್ ನಾಯಕ್, ರಮಾನಂದ ನಾಯಕ್, ಬೃಜೇಶ್ ಸಾಮಾನಿ, ಸುಧಾಕರ್ ಪೂಜಾರಿ, ಸುರೇಶ್ ಶೆಟ್ಟಿಗಾರ್, ನೀರಜ್ ಪಾಟೀಲ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.


Spread the love