ನವದೆಹಲಿಯಲ್ಲಿ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ

Spread the love

ನವದೆಹಲಿಯಲ್ಲಿ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ

ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ, ಕೆ.ಆರ್.ಪುರಂ, ಬೆಂಗಳೂರು ವತಿಯಿಂದ ನಾಡಪ್ರಭು ಕೆಂಪೇಗೌಡ ಫೌಂಡೇಷನ್, ನವದೆಹಲಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಸಹಕಾರದಲ್ಲಿ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಜುಲೈ 28, 2018ರಂದು ನಡೆದ ನಾಡ ಪ್ರಭು ಕೆಂಪೇಗೌಡ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವವು ವಿಜೃಂಭಣೆಯಾಗಿ ನಡೆಯಿತು.

ಕರ್‍ಕರ್‍ಡೂಮ್‍ ಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ಶ್ರೀ ಎ.ಎಸ್. ಜಯಚಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶ್ರೀ ಎಚ್.ವಿಶ್ವನಾಥ, ಮಾಜಿ ಸಚಿವರು ಹಾಗೂ ಶಾಸಕರು ಕರ್ನಾಟಕ ಸರ್ಕಾರ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಎಸ್. ರಾಘವೇಂದ್ರರಾವ್, ಪ್ರಧಾನ ಕಾರ್ಯದರ್ಶಿ, ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯ, ಭಾರತ ಸರ್ಕಾರ, ಶ್ರೀ ಸಿದ್ದೇಗೌಡ, ಕುಲಪತಿಗಳು, ತುಮಕೂರು ವಿಶ್ವವಿದ್ಯಾಲಯ, ಕರ್ನಾಟಕ ಸರ್ಕಾರ, ಶ್ರೀಮತಿ ಪದ್ಮಾಶೇಖರ್, ಕುಲಪತಿಗಳು, ಸಂಸ್ಕøತ  ವಿಶ್ವವಿದ್ಯಾಲಯ, ಕರ್ನಾಟಕ ಸರ್ಕಾರ, ಶ್ರೀ ಚೇತನ್, ಐ.ಎ.ಎಸ್. ಅಧಿಕಾರಿಗಳು, ಶ್ರೀ ಪವನ್‍ಕುಮಾರ್, ಐ.ಎ.ಎಸ್., ಅಧಿಕಾರಿಗಳು, ಶ್ರೀ ಪಲ್ಲವಿಮಣಿ, ಅಧ್ಯಕ್ಷರುಕನ್ನಡ ಸಂಘ, ಬಂಗಾರುಪೇಟೆ ಹಾಗೂ ಕನ್ನಡ ಪ್ರಾಧಿಕಾರದ ಸದಸ್ಯರು, ಶ್ರೀ ವಸಂತ ಶೆಟ್ಟಿ ಬೆಳ್ಳಾರೆ, ಅಧ್ಯಕ್ಷರು, ದೆಹಲಿ ಕರ್ನಾಟಕ ಸಂಘ, ವಿದ್ವಾನ್ ಶ್ರೀ ಕೋಲಾರರಮೇಶ್, ಕಾರ್ಯದರ್ಶಿ ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ, ಕೆ.ಆರ್. ಪುರಂ, ಬೆಂಗಳೂರು ಹಾಗೂ ಶ್ರೀ ಸಿ.ಎಂ.ನಾಗರಾಜ, ಪ್ರಧಾನ ಕಾರ್ಯದರ್ಶಿ, ದೆಹಲಿ ಕರ್ನಾಟಕ ಸಂಘ ಇವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಎ.ಎಸ್. ಜಯಚಂದ್ರ ಅವರು ಕಲೆಯಾರ ಸೊತ್ತು ಅಲ್ಲ, ಬಡಮಕ್ಕಳಿಗೆ ವಿದ್ವಾನ್‍ ಕೋಲಾರ ರಮೇಶ್‍ ಅವರು ಧಾರೆ ಎಳೆಯುತ್ತಿದ್ದಾರೆ.ಇಂತಹ ಮಹನೀಯರಿಗೆ ನನ್ನ ಆಶೀರ್ವಾದ ಯಾವಾಗಲೂ ಇರುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಎಚ್. ವಿಶ್ವನಾಥ್‍ ಅವರು ಮಾತನಾಡುತ್ತಾ ರಾಷ್ಟ್ರದ ರಾಜಧಾನಿಯಲ್ಲಿ 70ಕ್ಕೂ ಹೆಚ್ಚು ಕಲಾವಿದರನ್ನು ಕರೆತಂದು ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲಾ ಪ್ರಕಾರದ ನೃತ್ಯರೂಪಕಗಳನ್ನು ಉಣಬಡಿಸಿದ ಶ್ರೀ ವಿದ್ವಾನ್‍ರಮೇಶ್‍ ಅವರಿಂದ ಮಾತ್ರ ಸಾಧ್ಯ ಎಂದು ನುಡಿದರು ಮತ್ತು ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರನ್ನು ಕಟ್ಟಿದರೆ ವಿದ್ವಾನ್‍ರಮೇಶ್‍ ಅವರು ಕಲೆ, ಸಂಸ್ಕøತಿಯನ್ನು ಜಾತ್ಯಾತೀತ ಮಕ್ಕಳಿಗೆ ಕಲಿಸುತ್ತಿರುವ ಇವರಿಗೆ ನನ್ನ ಶುಭ ಹಾರೈಕೆಗಳು.  ಇಂತಹ ಅತ್ಯದ್ಭುತ ಕಾರ್ಯಕ್ರಮವನ್ನು ಮಾಡಲು ಮೂಲ ಕಾರಣಕರ್ತರಾದ ನೀಡಿದ ಶ್ರೀ ಸಿ.ಎಂ.ನಾಗರಾಜ ಪ್ರಧಾನ ಕಾರ್ಯದರ್ಶಿಗಳಿಗೆ ಮತ್ತು ನಾಡಪ್ರಭು ಕೆಂಪೇಗೌಡ ಫೌಂಡೇಷನ್‍ಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಪಲ್ಲವಿಮಣಿ, ಇಂತಹ ಕಾರ್ಯಕ್ರಮ ರಾಷ್ಟ್ರರಾಜಧಾನಿಯಲ್ಲಿ ಮಾಡುವ ತಮಗೆ ಶುಭ ಹಾರೈಕೆಗಳು. ರಾಜಧಾನಿಯಲ್ಲಿ ಕೇಂಪೇಗೌಡರ ಹೆಸರಿನಲ್ಲಿ ಪ್ರತೀ ವರ್ಷ ಇಂತಹ ಕಾರ್ಯಕ್ರಮಗಳು ನಡೆಯಬೇಕು ಇದಕ್ಕೆ ನಮ್ಮ ಸಹಕಾರವಿದೆ ಎಂದು ತಿಳಿಸಿದೆ.

ಕಿಕ್ಕಿರಿದು ತುಂಬಿದ ಸಭಾಂಗಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಾದ ನೃತ್ಯರೂಪಕ – ಕುಮಾರಿ ರಚನ ಮತ್ತುತಂಡ, ಹೊಸಕೋಟೆ, ಸಮೂಹ ನೃತ್ಯ-ಶ್ರೀಭೂಮಿಕ ನೃತ್ಯ ಹಾಗೂ ಸಂಗೀತ ಶಾಲೆ, ಕಂಟೆಪರರಿ ನೃತ್ಯ-ವೆಂಕಿ ಸ್ಕೂಲ್‍ಆಫ್‍ ಡಾನ್ಸ್, ಬೆಂಗಳೂರು, ಜಾನಪದ ನೃತ್ಯ-ನಾಟ್ಯಾಂಜಲಿ ನೃತ್ಯಕಲಾ ಅಕಾಡೆಮಿ, ದೊಡ್ಡಸಂದ್ರ, ಕೋಲಾಟ-ಮಧುಶ್ರೀ ಮತ್ತು ತಂಡ, ಬೆಂಗಳೂರು, ಬಳೆಗಾರ ಜಾನಪದ ನೃತ್ಯ-ಶಿವಪ್ಪ ಮತ್ತು ತಂಡ, ನವದೆಹಲಿ, ಭರತನಾಟ್ಯ-ಸಂಜೀವಿನಿ ನೃತ್ಯಶಾಲೆ, ಬೆಂಗಳೂರು, ನೃತ್ಯ ವೈಭವ-ಹರ್ಷಿತ ಕೊಕ್ಕಡ, ಸಪ್ನಾ ಅತ್ತಾವರ, ಪ್ರೇರಣಾರಾವ್, ಕನಿಕಾ ಭಟ್, ನವದೆಹಲಿ, ಸ್ನೇಹಾಚಂದ್ರ ಶೇಖರ್, ಗುರ್‍ಗಾಂವ್ ಹಾಗೂ ಮಾರ್ಷಲ್‍ಆರ್ಟ್-ರಾಜೇಶ್‍ಸಾಯಿಬಾಬು, ನವದೆಹಲಿ ಇವರ ಸಾಂಸ್ಕøತಿಕ ಕಾರ್ಯಕ್ರಮಗಳು ದೆಹಲಿ ಕನ್ನಡಿಗರ ಮನಸೂರೆಗೊಂಡಿತು.

ಇದೇ ಸಂದರ್ಭದಲ್ಲಿ ನೂತನ ಶಾಸಕರಾದ ಶ್ರೀ ಎಚ್. ವಿಶ್ವನಾಥ್, ಶ್ರೀ ಪಲ್ಲವಿಮಣಿ, ಅಧ್ಯಕ್ಷರು ಕನ್ನಡ ಸಂಘ, ಬಂಗಾರುಪೇಟೆ ಹಾಗೂ ಕನ್ನಡ ಪ್ರಾಧಿಕಾರದ ಸದಸ್ಯರು, ಕರ್ನಾಟಕ ಸರಕಾರ,  ನೂತನ ಐ.ಎ.ಎಸ್. ಅಧಿಕಾರಿಗಳಾದ ಶ್ರೀ ಚೇತನ್ ಮತ್ತು  ಶ್ರೀ ಪವನ್‍ಕುಮಾರ್‍ ಅವರನ್ನು ಅಭಿನಂದಿಸಲಾಯಿತು.

ಶ್ರೀ ಎನ್.ಪಿ.ಚಂದ್ರಶೇಖರ್‍ಅವರುಕಾರ್ಯಕ್ರಮವನ್ನುಅಚ್ಚುಕಟ್ಟಾಗಿ ನಿರೂಪಿಸಿದರು.


Spread the love