ನವರಾತ್ರಿ ಉತ್ಸವದಲ್ಲಿ ಶ್ರೀ ದುರ್ಗೆಯ ಲಲಿತ ಸಹಸ್ರನಾಮ ಪಠಣೆ, ಭಜನೆ, ರಥ ಯಾತ್ರೆ, ದಾಂಡಿಯಾ ರಾಸ್ 

Spread the love

ನವರಾತ್ರಿ ಉತ್ಸವದಲ್ಲಿ ಶ್ರೀ ದುರ್ಗೆಯ ಲಲಿತ ಸಹಸ್ರನಾಮ ಪಠಣೆ, ಭಜನೆ, ರಥ ಯಾತ್ರೆ, ದಾಂಡಿಯಾ ರಾಸ್ 

ಮುಂಬಯಿ: ಸನಾತನ ಸಂಸ್ಕೃತಿಗೆ ಆದಿಯಿಲ್ಲ ಅದು ನಿತ್ಯ ನಿರಂತರವಾಗಿದ್ದು ಅದಕ್ಕೆ ಎಂದೂ ಅಂತ್ಯವಿಲ್ಲದಿರಲಿ, ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ನುಡಿದರು.

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ವತಿಯಿಂದ ನವರಾತ್ರಿ ಉತ್ಸವದ ನಿಮಿತ್ತ ಸೆ. 27 ರಂದು ಶ್ರೀ ದುರ್ಗಾ ಉಪಾಸನೆಯ ಲಲಿತಾ ಸಹಸ್ರನಾಮ, ಭಜನೆ, ರಥ ಯಾತ್ರೆ ಮತ್ತು ದಾಂಡಿಯಾ ರಾಸ್ ಕಾರ್ಯಕ್ರಮವನ್ನು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಹಾಗೂ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆಯವರ ನೇತೃತ್ವದಲ್ಲಿ ಕಾಂದಿವಲಿ ಪೂರ್ವದ ಠಾಕೂರು ಕಾಂಪ್ಲೆಕ್ಸ್ ನ ಅವೆನ್ಯೂ ಹೋಟೇಲಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು ಅದರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಇಂದು ಇಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ಶ್ರೀ ದೇವಿಯ ರಥಯಾತ್ರೆ ನೆರವೇರಿದ್ದು ಅದರಲ್ಲೂ ಭಾಗವಹಿಸುವ ಸೌಭಾಗ್ಯ ನನಗೆ ದೊರಕಿದೆ. ಇಂತಹ ರಥಯಾತ್ರೆ ಬಂಟರ ಸಂಘ ಮುಂಬಯಿಯ ಇತಿಹಾಸದಲ್ಲೇ ಪ್ರಥಮ ಎನ್ನುತ್ತಾ ಇಲ್ಲಿಯ ಮಹಿಳಾ ವಿಭಾಗವನ್ನು ಅಭಿನಂದಿಸಿದರು. ಬಂಟರ ಸಂಘ ಮುಂಬಯಿಯ ಬೊರಿವಲಿ ಶಿಕ್ಷಣ ಸಂಸ್ಥೆಯು ಈ ಪ್ರಾದೇಶಿಕ ಸಮಿತಿಯ ಪರಿಸರದಲ್ಲೇ ಇದ್ದು ಇದಕ್ಕೆ ದೊಡ್ಡ ಮಟ್ಟದಲ್ಲಿ ದೇಣಿಗೆ ನೀಡಿದ ಖ್ಯಾತ ಉದ್ಯಮಿ ಶಶಿಕಿರಣ್ ಶೆಟ್ಟಿಯವರನ್ನು ಅಭಿನಂದಿಸಲೇ ಬೇಕು. ಅವರಂತೆಯೇ ನಮ್ಮ ಬಂಟ ಸಮಾಜದ ಹಲವಾರು ಕೊಡುಗೈ ದಾನಿಗಳು ಇದಕ್ಕೆ ಕೈಜೋಡಿಸಿರುತ್ತಾರೆ.ಈ ಶಿಕ್ಷಣ ಸಂಸ್ಥೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲಿದ್ದೇವೆ. ಇದಕ್ಕೆ ಯಾವುದೇ ಅಡೆತಡೆಗಳಿಲ್ಲದೇ ಪೂರ್ಣ ಪ್ರಮಾಣದ Occupation Certificate ಈಗಾಗಲೇ ನಮ್ಮ ಕೈ ಸೇರಿರುತ್ತದೆ. ಇದೊಂದು ನಮ್ಮ ಸಮಾಜದ ದೊಡ್ಡ ಸಾಧನೆ. 2025 ರ ಯುವ ವಿಭಾಗದ ಆಕಾಂಕ್ಷಾ ಸೌಂದರ್ಯ ಸ್ಫರ್ಧೆಯಲ್ಲಿ ಈ ಪ್ರಾದೇಶಿಕ ಸಮಿತಿಯ ಆರು ಮಂದಿ ಸ್ಫರ್ಧಾಳುಗಳು ಭಾಗವಹಿಸಿದ್ದು, ಮಿಸ್ ಬಂಟ್ಸ್ ನಲ್ಲಿ ಪ್ರಥಮ ಮತ್ತು ಮಿಸೆಸ್ ಬಂಟ್ಸ್ ನಲ್ಲಿ ಪ್ರಥಮ ರನ್ನರ್ ಆಫ್ ಬಹುಮಾನ ಈ ಪ್ರಾದೇಶಿಕ ಸಮಿತಿಯವರಿಗೆ ಬಂದಿದ್ದು, ಸ್ಫರ್ಧೆಯಲ್ಲಿ ಭಾಗವಹಿಸಿದ ಎಲ್ಲರನ್ನು ಅಭಿನಂದಿಸಿದರು.

ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ ಎಲ್ಲರನ್ನು ಸ್ವಾಗತಿಸುತ್ತಾ ಈಗಾಗಲೇ ಶ್ರೀದೇವಿಯು ಎಲ್ಲಾ ಭಕ್ತರನ್ನು ಇಲ್ಲಿಗೆ ಬರಮಾಡಿಕೊಂಡು ಸ್ವಾಗತಿಸಿದ್ದಾರೆ, ಶಕ್ತಿಯ ಆರಾಧನೆ ಮಾಡುವ ಈ ಹಬ್ಬದಲ್ಲಿ ಕೇವಲ ಭಕ್ತಿ ಮಾತ್ರವಲ್ಲದೆ ಲಲಿತ ಸಹಸ್ರನಾಮ ಪಠಿಸಿದರೆ ಅದರಲ್ಲಿ ಬಹಳಷ್ಟು ಶಕ್ತಿಯೂ ಉದ್ದೀಪನಗೊಳ್ಳುತ್ತದೆ. ಇದನ್ನು ಎಲ್ಲರೂ ಒಟ್ಟಾಗಿ ಪಠಿಸಿದಾಗ ಇನ್ನೂ ಹೆಚ್ಚಿನ ಶಕ್ತಿಯು ದೊರೆಯುತ್ತದೆ. ಎಲ್ಲರಿಗೂ ಶ್ರೀ ದುರ್ಗಾ ಮಾತೆಯ ಅನುಗ್ರಹ ದೊರೆಯಲಿ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಯವರು ಇಂದು ಶಕ್ತಿಯನ್ನು ನೀಡುವ ದೇವಿಯನ್ನು ಆರಾದನೆ ಮಾಡುವ ನವರಾತ್ರಿಯ ಆರನೇ ದಿನ. ನವರಾತ್ರಿಯಲ್ಲಿ ನಾವು ಮಾತೆಯ ವಿವಿದ ರೂಪವನ್ನು ಕಾಣಬಹುದು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ ಯವರ ನೇತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಇಲ್ಲಿ ಮಹಿಳಾ ಶಕ್ತಿಯು ಎದ್ದು ಕಾಣುತ್ತಿದೆ ಎಂದರು. ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸಿದ ಅವರಿಗೆ ಹಾಗೂ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತಾ ಎಲ್ಲರಿಗೂ ಶ್ರೀ ದೇವಿಯ ಆಶ್ರೀರ್ವಾದ ಪ್ರಾಪ್ತಿಯಾಗಲಿ ಎಂದರು. ಬೊರಿವಲಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ನಿತ್ಯಾನಂದ ಹೆಗ್ಡೆಯವರು ಶಿಕ್ಷಣ ಸಂಸ್ಥೆಯ ಬಗ್ಗೆ ಮಾತನಾಡಿ, ಬೊರಿವಲಿ ಪಶ್ಚಿಮದ ಐ. ಸಿ. ಕಾಲೋನಿಯಲ್ಲಿ ಪದ್ಮನಾಭ ಪಯ್ಯಡೆಯವರು ಬಂಟರ ಸಂಘದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಈ ಶಿಕ್ಷಣ ಸಂಸ್ಥೆಯ ಕಾರ್ಯಾರಂಭವಾಗಿದೆ. ಬೊರಿವಲಿ ಶಿಕ್ಷಣ ಸಂಸ್ಥೆಯು ಮುಂಬಯಿಯ ಇತರ ಶಿಕ್ಷಣ ಸಂಸ್ಥೆಗಳಿಗಿಂತ ವಿಭಿನ್ನವಾಗಿದ್ದು ಎಲ್ಲಾ ರೀತಿಯ ಸೌಲಭ್ಯದಿಂದ ಅಂತರಾಷ್ಟೀಯ ಮಟ್ಟದ್ದಲ್ಲಿದೆ. ಈ ಶಿಕ್ಷಣ ಸಂಸ್ಥೆಗೆ ಎಲ್ಲರೂ ಬೇಟಿ ನೀಡಿ ಅದನ್ನು ಕಣ್ಣಾರೆ ನೋಡಬೇಕೆಂದರು. ಬೊರಿವಲಿ ಶಿಕ್ಷಣ ಸಂಸ್ಥೆಯ ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಪಯ್ಯಡೆಯವರು ಮಾತನಾಡುತ್ತಾ ಬೊರಿವಲಿ ಶಿಕ್ಷಣ ಸಂಸ್ಥೆಯ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು. ಈಗಾಗಲೇ ಶಿಕ್ಷಣ ಸಂಸ್ಥೆಗೆ ದೊಡ್ಡ ಮಟ್ಟದಲ್ಲಿ ಧನ ಸಹಾಯ ಮಾಡಿ ಸಹಕರಿಸಿದ ಎಲ್ಲರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಪ್ರತಿ ವರ್ಷ ನವರಾತ್ರಿ ಉತ್ಸವಕ್ಕೆ ದೊಡ್ಡ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದ್ದು, ಬೊರಿವಲಿ ಶಿಕ್ಕ್ಷಣ ಸಂಸ್ಥೆಗೆ ಬೃಹತ್ ಮೊತ್ತದ ದೇಣಿಗೆಯನ್ನು ನೀಡಿದ ಅವೆನ್ಯೂ ಹೋಟೇಲಿನ ಮಾಲಕ ರಘುರಾಮ ಶೆಟ್ಟಿ ದಂಪತಿ, ಬೊರಿವಲಿ ಶಿಕ್ಕ್ಷಣ ಸಂಸ್ಥೆಗೆ ಭೇಟಿ ನೀಡಿ, ತಮ್ಮ ಹೆಸರಿನಲ್ಲಿ ಒಂದು ತರಗತಿಯ ಕೊಠಡಿಗೆ ದೇಣಿಗೆಯನ್ನು ನೀಡಿದ ಹಿರಿಯ ನಾಗರಿಕ ಎಕ್ಕಾರು ಕೃಷ್ಣ ಶೆಟ್ಟಿ ದಂಪತಿಯನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಇತ್ತೀಚೆಗೆ ಬಂಟರ ಸಂಫದ ಯುವ ವಿಭಾಗದ ಆಶ್ರಯದಲ್ಲಿ ಜರಗಿದ ಆಕಾಂಕ್ಷಾ ೨೦೨೫ ರಲ್ಲಿ ಮಿಸ್ ಬಂಟ್ಸ್ ಆಗಿ ಆಯ್ಕೆಯಾದ ದ್ವಿಪ್ತಾ ಪಿ. ಶೆಟ್ಟಿ ಮತ್ತು ಮಿಸೆಸ್ ಬಂಟ್ಸ್ ಪ್ರಥಮ ರನ್ನರ್ಸ್ ಅಫ್ ಆಗಿ ವಿಜೇತರಾದ ಆಮ್ರತಾ ಎ. ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಅಲ್ಲದೆ ಅದರಲ್ಲಿ ಬಾಗವಹಿಸಿದ ಎಲ್ಲರನ್ನು ಅಭಿನಂದಿಸಿ ಗೌರವಿಸಲಾಯಿತು. ಗಿನ್ನೆಸ್ ಬುಕ್ಸ್ ಆಫ್ ರೆಕಾರ್ಡ್ಸ್ ನಲ್ಲಿ ತಮ್ಮ ಹೆಸರನ್ನು ಸ್ಥಾಯಿಗೊಳಿಸಿದ ಡಾ. ಆರ್. ಕೆ.ಶೆಟ್ಟಿಯವರನ್ನು ಹಾಗೂ ಪ್ರಕಾಶ್ ಎ ಶೆಟ್ಟಿಯವರನ್ನು ಅಭಿನಂದಿಸಿ ಗೌರವಿಸವಲಾಯಿತು. ಹಾಗೆಯೇ ಪ್ರಾದೇಶಿಕ ಸಮಿತಿಯಲ್ಲಿ ಸೇವೆಗೈದ ಎಲ್ಲಾ ಮಾಜಿ ಕಾರ್ಯಾಧ್ಯಕ್ಷ, ಕಾರ್ಯಾಧ್ಯಕ್ಷೆ , ಇತರ ಕಾರ್ಯಕರ್ತರನ್ನು ಹಾಗೂ ಸಲಹೆಗಾರರನ್ನು ಗೌರವಿಸಲಾಯಿತು.

ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಪೊವಾಯಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಕವಿತಾ ಐ. ಅರ್. ಶೆಟ್ಟಿ, ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ಗೌರವ್ ಪಯ್ಯಡೆ, ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸಂಚಾಲಕಿ ಶೈಲಜಾ ಎ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ರೇಖಾ ವೈ ಶೆಟ್ಟಿ, ಕಾರ್ಯದರ್ಶಿ ಸರಿತಾ ಎಂ ಶೆಟ್ಟಿ, ಕೋಶಾಧಿಕಾರಿ ಶುಭಾಂಗಿ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಯೋಗಿನಿ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಭಾವತಿ ಎಚ್ ಶೆಟ್ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ ಶೆಟ್ಟಿ,ಕೋಶಾಧಿಕಾರಿ ಅವಿನಾಶ್ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ರಮೇಶ್ ಎಚ್. ಶೆಟ್ಟಿ ಉಪ ಕಾರ್ಯಾಧ್ಯಕ್ಷ ಪ್ರಜ್ವಲ್ ಶೆಟ್ಟಿ, ಕಾರ್ಯದರ್ಶಿ ಸಮೀಕ್ಷಾ ಶೆಟ್ಟಿ, ಕೋಶಾಧಿಕಾರಿ ವಿಭಾ ಶೆಟ್ಟಿ, ಜೊತೆ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಜೊತೆ ಕೋಶಾಧಿಕಾರಿ ವಿಶ್ವಾಸ್ ಶೆಟ್ಟಿ, ಸಲಹೆಗಾರರಾದ ಮನೋಹರ ಎನ್ ಶೆಟ್ಟಿ, ವಿಜಯ ಆರ್ ಭಂಡಾರಿ ಸಮಿತಿಯ ಎಲ್ಲಾ ಸದಸ್ಯರು, ಕಾರ್ಯಾಕಾರಿ ಸಮಿತಿ, ಉಪಸಮಿತಿ, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಎಲ್ಲಾ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಪ್ರಾರಂಭದಲ್ಲಿ ಮಹಿಳಾ ವಿಭಾಗದ ಸದಸ್ಯೆಯರಿಂದ ಶ್ರೀ ಲಲಿತ ಸಹಸ್ರನಾಮ ಪಠಣದೊಂದಿಗೆ ನೆರೆದ ಮಹಿಳೆಯರೆಲ್ಲರೂ ಶ್ರೀದೇವಿಗೆ ಕುಂಕುಮಾರ್ಚನೆ ಸೇವೆಯನ್ನು ಸಲ್ಲಿಸಿದರು. ಬಳಿಕ ಮಹಿಳಾ ವಿಭಾಗದ “ಇಂಚರ” ತಂಡದ ಸದಸ್ಯೆಯರು ಭಜನಾ ಕಾರ್ಯಕ್ರಮದ ಮೂಲಕ ಶ್ರೋತೃಗಳನ್ನು ರಂಜಿಸಿದರು. ನಂತರ ಚೆಂಡೆ ಮೇಳದೊಂದಿಗೆ ಶ್ರೀ ದೇವಿಯ ರಥ ಯಾತ್ರೆ ನೆರವೇರಲ್ಪಟ್ಟು ಆರತಿಯನ್ನು ಬೆಳಗಲಾಯಿತು. ದಾಂಡಿಯಾ ರಾಸ್ ಕಾರ್ಯಕ್ರಮದಲ್ಲಿ ನೆರದ ಎಲ್ಲಾ ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ದೇವಿಯ ಪ್ರಸಾದ ಹಾಗೂ ಪ್ರಸಾದ ಭೋಜನವನ್ನು ಸ್ವೀಕರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಶುಭಾಂಗಿ ಎಸ್ ಶೆಟ್ಟಿ ಹಾಗೂ ಸರಿತಾ ಎಂ ಶೆಟ್ಟಿ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮವನ್ನು ಯೋಗಿನಿ ಎಸ್ ಶೆಟ್ಟಿ, ರೇಖಾ ವೈ ಶೆಟ್ಟಿನಿರ್ವಹಿಸಿದರು. ರಘುನಾಥ ಎನ್. ಶೆಟ್ಟಿ ಕಾಂದಿವಲಿ, ಅಶೋಕ್ ವಿ ಶೆಟ್ಟಿ ಬೊರಿವಲಿ , ರೋಹಿತ್ ಶೆಟ್ಟಿ ಅಹುರಾ ಸಹಕರಿಸಿದರು. ಜೊತೆ ಕೋಶಾಧಿಕಾರಿ ಪ್ರಭಾವತಿ ಎಚ್ ಶೆಟ್ಟಿ ಅಭಾರ ಮನ್ನಿಸಿದರು.


Spread the love
Subscribe
Notify of

0 Comments
Inline Feedbacks
View all comments