ನವೆಂಬರ್ 22 ರಂದು ರನ್ ಫಾರ್ ಫಿಶ್ ಮ್ಯಾರಥಾನ್

Spread the love

ನವೆಂಬರ್ 22 ರಂದು ರನ್ ಫಾರ್ ಫಿಶ್ ಮ್ಯಾರಥಾನ್

ಮಂಗಳೂರು : ದೇಶದ ಮೊಟ್ಟ ಮೊದಲ ಮೀನುಗಾರಿಕೆ ಕಾಲೇಜು ಎಂದು ಹೆಗ್ಗಳಿಕೆ ಗಳಿಸಿರುವ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಮತ್ತು ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ “ಉತ್ತಮ ಆರೋಗ್ಯ ಮತ್ತು ಸಂಪತ್ತಿಗಾಗಿ ಮೀನು” ಎಂಬ ಸಂದೇಶ ಸಾರಲು ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ನವೆಂಬರ್ 22 ರಂದು “ರನ್ ಫಾರ್ ಫಿಶ್ ಮ್ಯಾರಥಾನ್” ಆಯೋಜಿಸುತ್ತಿದ್ದಾರೆ.

ಈ ಮ್ಯಾರಥಾನ್ ಮಂಗಳೂರಿನ ನೆಹರು ಮೈದಾನದಿಂದ ಅಂದು ಬೆಳ್ಳಿಗೆ 7 ಗಂಟೆಗೆ ಚಾಲನೆ ಪಡೆದು ಎಕ್ಕೂರಿನಲ್ಲಿರುವ ಮೀನುಗಾರಿಕಾ ಕಾಲೇಜಿನ ಮುಖ್ಯ ಆವರಣವನ್ನು ತಲುಪಲಿದೆ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಮತ್ತು ಕಮೀಷನರ್ ಆಫ್ ಪೋಲೀಸ್ ಟಿ.ಆರ್.ಸುರೇಶ್, ಅವರು ಮುಖ್ಯ ಅಥಿತಿಯಾಗಿ ಭಾಗವಹಿಸಲಿದ್ದಾರೆ. ಡಾ. ಎಚ್. ಶಿವಾನಂದ ಮೂರ್ತಿ ಡೀನ್, ಮೀನುಗಾರಿಕಾ ಕಾಲೇಜು, ಮಂಗಳೂರು ಇವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.


Spread the love