ನಾಟೆಕಲ್ ಸಮೀಪ ಬೈಕ್ ಅಪಘಾತ ವಿವಾಹಿತೆ ಸಾವು, ಸವಾರ ಗಂಭೀರ

Spread the love

ನಾಟೆಕಲ್ ಸಮೀಪ ಬೈಕ್ ಅಪಘಾತ ವಿವಾಹಿತೆ ಸಾವು, ಸವಾರ ಗಂಭೀರ

ಉಳ್ಳಾಲ: ನಾಟೆಕಲ್ ಸಮೀಪ ಇಂದು ಮದ್ಯಾಹ್ನ ವೇಳೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಸಹಸವಾರೆ ವಿವಾಹಿತ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದು, ಸವಾರ ಸಂಬಂಧಿ ಗಂಭೀರ ಸ್ಥಿತಿಯಲ್ಲಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೋಂದೇಲ್ ದೀಕ್ಷಿತ್ ಎಂಬವರ ಪತ್ನಿ ನಿಧಿ (29) ಸಾವನ್ನಪ್ಪಿದವರು. ಸಹಸವಾರ ಯತೀಶ್ ದೇವಾಡಿಗ ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರು ಮುಡಿಪುವಿನಲ್ಲಿ ಇಂದು ಜರಗಿದ್ದ ಸಂಬಂಧಿಕರ ಗೃಹಪ್ರವೇಶದಲ್ಲಿ ಭಾಗವಹಿಸಿ ವಾಪಸ್ಸಾಗುವ ಸಂದರ್ಭ ಬೈಕ್, ಸವಾರನ ನಿಯಂತ್ರಣ ತಪ್ಪಿ ನಾಟೆಕಲ್ ಗ್ರೀನ್ ಗ್ರೌಂಡ್ ಸಮೀಪ ಡಿವೈಡರ್ ಗೆ ಬಡಿದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ನಿಧಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಯತೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

Leave a Reply