ನಿಡ್ಡೋಡಿ ಸಂತ ತೆರೆಜಮ್ಮನವರ ದೇವಾಲಯದಲ್ಲಿ ಈಸ್ಟರ್ ಸಂಭ್ರಮಾಚರಣೆ

Spread the love

ನಿಡ್ಡೋಡಿ ಸಂತ ತೆರೆಜಮ್ಮನವರ ದೇವಾಲಯದಲ್ಲಿ ಈಸ್ಟರ್ ಸಂಭ್ರಮಾಚರಣೆ

ಮಂಗಳೂರು: ನಿಡ್ಡೋಡಿ ಸಂತ ತೆರೆಜಮ್ಮನವರ ದೇವಾಲಯದಲ್ಲಿ ಯೇಸುವಿನ ಪುನರುತ್ತಾನದ ಹಬ್ಬ ಈಸ್ಟರ್ ಸಂಭ್ರಮದಿಂದ ಆಚರಿಸಲಾಯಿತು.

ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರಾದ ಅತೀ ವಂದನಿಯ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ರವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿ ಶುಭ ಸಂದೇಶವನ್ನು ನೀಡಿ ಶುಭಕೋರಿದರು.

ಚರ್ಚಿನ ಧರ್ಮ ಗುರುಗಳಾದ ವಂದನಿಯ ಡೇನಿಸ್ ಸುವಾರಿಸ್, ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಜೆಸಿಂತಾ ಡಿಸೋಜಾ, ಕಾರ್ಯದರ್ಶಿಯಾದ  ಜೀವನ್ ಕ್ರಾಸ್ತಾ ಪಾಲಾನ ಮಂಡಳಿಯ ಸದಸ್ಯರು ಹಾಗೂ ಚರ್ಚಿನ ಸರ್ವ ಸದಸ್ಯರು ಬಿಷಪ್ ರವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ವಂದನಿಯ ಫಾ. ದೀಪಕ್ ನೊರೊನ್ಹಾ, ಬ್ರದರ್ ಜೀವನ್ ಲೋಬೊ ಚರ್ಚಿನ ಭಕ್ತಿಕರು ಉಪಸ್ಥಿತರಿದ್ದರು.


Spread the love

Leave a Reply