ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 18 ವರ್ಷಗಳಿಂದ ತಲೆ ಮರೆಸಿಕೊಂಡಿದ್ದವ್ಯಕ್ತಿಯ ಬಂಧನ

Spread the love

ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 18 ವರ್ಷಗಳಿಂದ ತಲೆ ಮರೆಸಿಕೊಂಡಿದ್ದವ್ಯಕ್ತಿಯ ಬಂಧನ

ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 18 ವರ್ಷಗಳಿಂದ ತಲೆ ಮರೆಸಿಕೊಂಡಿದ್ದವ್ಯಕ್ತಿಯನ್ನು ಬಜಪೆ ಪೋಲಿಸರು ಬಂಧಿಸಿದ್ದಾರೆ.

ಬಂಧಿತನನ್ನು ಮಂಗಳೂರು ಸೂರಲ್ಪಾಡಿ ನಿವಾಸಿ ಫಯಾಜ್ ಆಲಂ ಎಂದು ಗುರುತಿಸಲಾಗಿದೆ.

ಬಜಪೆ ಪೊಲೀಸ್ ಠಾಣೆಯ ಅ.ಕ್ರ. 200/2000 ಕಲಂ: 143,147,148,504, 436,427, ಜತೆಗೆ 149 ಐ.ಪಿ.ಸಿ ಪ್ರಕರಣದಲ್ಲಿನ ಆರೋಪಿಯಾದ ಫಯಾಜ್ ಆಲಂ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 18 ವರ್ಷಗಳಿಂದ ತಲೆ ಮರೆಸಿಕೊಂಡಿದ್ದರಿಂದ ಆತನ ದಸ್ತಗಿರಿಗೆ ನ್ಯಾಯಾಲಯವು ಎಲ್.ಪಿ.ಸಿ ವಾರಂಟ್ ಹೊರಡಿಸಿತ್ತು, ಆರೋಪಿಯ ಪತ್ತೆಗೆ ಶ್ರಮಿಸಿದಾಗ ಆತ ವಿದೇಶಕ್ಕೆ ಹೋಗಲು ಸನ್ನದ್ದನಾಗಿದ್ದಾನೆ ಎಂಬ ಮಾಹಿತಿಯನ್ನು ಪಡೆದು ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರವರು ಆತನ ವಿರುದ್ದ ಎಲ್.ಓ.ಸಿ ಯನ್ನು ಹೊರಡಿಸುವಂತೆ ವಿನಂತಿಸಿಕೊಂಡಂತೆ ಮಂಗಳೂರು ಪೊಲೀಸ್ ಅಯುಕ್ತರು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿದ್ದರು,

ಅದರ ಆಧಾರದಲ್ಲಿ ಅಗೋಸ್ತ್ 31 ರಂದು ಆರೋಪಿಯು ದೆಹಲಿ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ ಸಮಯ ಅಲ್ಲಿನ ಇಮಿಗ್ರೇಷನ್ ಅಧಿಕಾರಿಯವರು ವಶಕ್ಕೆ ಪಡೆದುಕೊಂಡು ನೀಡಿದ ಮಾಹಿತಿಯಂತೆ ಆರೋಪಿಯನ್ನು ಬಜಪೆ ಠಾಣಾ ಸಿಬ್ಬಂದಿಯರು ದೆಹಲಿಯಿಂದ ದಸ್ತಗಿರಿ ಮಾಡಿ ಕರೆ ತಂದು ಸಪ್ಟೆಂಬರ್ 1 ರಂದು 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಆರೋಪಿಯು ಸುಮಾರು 18 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತೆಲೆಮರೆಸಿಕೊಂಡಿರುತ್ತಾನೆ.

ಈ ಪತ್ತೆ ಕಾರ್ಯದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಶಂಕರ್ ನಾಯರಿ, ಎ.ಎಸ್.ಐ ರಾಮಚಂದ್ರ, ಹೆಚ್.ಸಿ 635 ರಾಮಾನಾಯ್ಕ, ಹೆಚ್.ಸಿ 510 ರಾಜೇಶ್, ಪಿ.ಸಿ 889 ಹರಿ ಪ್ರಸಾದ್ ರವರು ಭಾಗವಹಿಸಿರುತ್ತಾರೆ.


Spread the love