ನ. 2 ರಂದು ನೀರು ವಿತರಣೆಯನ್ನು ಸಂಪೂರ್ಣ ಸ್ಥಗಿತ

Spread the love

ನ. 2 ರಂದು ನೀರು ವಿತರಣೆಯನ್ನು ಸಂಪೂರ್ಣ ಸ್ಥಗಿತ

ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಐಐPS-2 80ಒಐಆ ರೇಚಕ ಸ್ಥಾವರದ ಜಾಕ್‍ವೆಲ್‍ನಲ್ಲಿ ಮರಳು, ಕಸಕಡ್ಡಿಗಳು, ಮಡ್ಡಿ ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿರುವುದನ್ನು ಸರಿಪಡಿಸಲು, ಜಾಕ್‍ವೆಲ್‍ನ್ನು ಶುಚಿಗೊಳಿಸಲು ಹಾಗೂ ಎನ್.ಆರ್.ವಿ ದುರಸ್ಥಿಗೊಳಿಸಲು ನವೆಂಬರ್ 2 ರಂದು ಪೂರ್ವಾಹ್ನ ಗಂಟೆ 6 ರಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಂಡಿದ್ದು, ಸದ್ರಿ ಅವಧಿಯಲ್ಲಿ ಪಡೀಲ್ ರೇಚಕ ಸ್ಥಾವರದಿಂದ ನೀರು ಸರಬರಾಜಾಗುವ ಮಂಗಳೂರು ನಗರ ಭಾಗಶ: ಪ್ರದೇಶ, ಕಾರ್‍ಸ್ಟ್ರೀಟ್, ಮೇರಿಹಿಲ್, ಮಂಗಳಾದೇವಿ, ಬೋಳಾರ, ಮಣ್ಣಗುಡ್ಡ, ಮುಳಿಹಿತ್ಲು, ಪಾಂಡೇಶ್ವರ, ಸ್ಟೇಟ್‍ಬ್ಯಾಂಕ್ ಇತ್ಯಾದಿ ಪ್ರದೇಶಗಳಲ್ಲಿ ನೀರು ವಿತರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ಎಂದು ಆಯುಕ್ತರು, ಮಹಾನಗರಪಾಲಿಕೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love