ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಪುಣ್ಯ ಸ್ಮರಣೆ ಕಾರ್ಯಕ್ರಮ

Spread the love

ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಪುಣ್ಯ ಸ್ಮರಣೆ ಕಾರ್ಯಕ್ರಮ

ಮಂಗಳೂರು : ಸಂವೇದನೆ, ಪರಿಶ್ರಮ, ಬದ್ದತೆ ಮತ್ತು ಕುಶಲತೆ ಇದ್ದರೆ ಉನ್ನತ ಯಾವುದೇ ಸ್ಥಾನವನ್ನು ತಲುಪಲು ಸಾದ್ಯ ಇವೆಲ್ಲವನ್ನೂ ಮೈಗೂಡಿಸಿಕೊಂಡಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಭಾರತೀಯ ಜನತಾ ಪಾರ್ಟಿಯನ್ನು ಬಲಪಡಿಸುವಲ್ಲಿ ಶ್ರಮವಹಿಸಿದ್ದಾರೆ. ಅವರ ಜೀವನಾದರ್ಶನ ಮತ್ತು ಗುಣಗಳನ್ನು ಪ್ರತಿಯೊಬ್ಬ ಕಾರ್ಯಕರ್ತ ಮೈಗೂಡಿಸಿಕೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಹ ಸಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕರೆ ನೀಡಿದರು.

ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮ ಶತಾಬ್ದಿ ವರ್ಷಾಚರಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜಿಲ್ಲಾ ಕಚೇರಿಯಲ್ಲಿ ನಡೆದ ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ದೀನ ದಯಾಳ್‍ರ ಭಾವಚಿತ್ರಕ್ಕೆ ಪುಷ್ಫ ನಮನ ಸಲ್ಲಿಸಿ ಅವರು ಮಾತನಾಡಿದರು.

ದೀನ್ ದಯಾಳ್‍ರು ಕ್ರಿಯಾಶೀಲತೆ ಮತ್ತು ವೈಚಾರಿಕತೆಯಿಂದ ಬದುಕಿದವರು. ಯಾವುದೇ ಸ್ಥಾನವನ್ನು ಬಯಸದೇ ಸಾಮಾನ್ಯ ವ್ಯಕ್ತಿಯಾಗಿಯೇ ಆಸಾಮಾನ್ಯ ಸಾಧನೆ ತೋರಿದವರು.ಅವರೊಬ್ಬ ಶ್ರೇಷ್ಠ ಮಹಾ ಪುರುಷ. ಅವರ ಜೀವನ ಅದರ್ಶಗಳಿಗೆ ನಾವುಗಳು ಹತ್ತಿರವಾಗಬೆÉೀಕು. ಅವರ ಬದುಕಿನ ಗುಣ ಅಳವಡಿಸಿಕೊಳ್ಳಬೇಕು. ಸಾತ್ವಿಕÀ ಜೀವನ ನಡೆಸಿದ ಅವರು ತನ್ನ ರಾಜಕೀಯ ಜೀವನದ 17 ವರ್ಷದÀಲ್ಲಿ ಆದರ್ಶವಾಗಿ ಬೆಳೆದವರು. ಅವರ ಜನ್ಮ ಶತಾಬ್ದಿ ವರ್ಷಾಚರಣೆಯನ್ನು ಬಿಜೆಪಿ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಆಚರಿಸುತ್ತಿದೆ ಎಂದರು.

ಬಿಜಿಪಿ ದ.ಕ ಜಿಲಾದ್ಯಕ್ಷ ಸಂಜೀವ ಮಠಂದೂರು, ಮಂಗಳೂರು ನಗರ ದಕ್ಷ್ಶಿಣ ಕ್ಷೇತ್ರ ಅದ್ಯಕ್ಷ ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.


Spread the love