ಪಂಪ್‍ವೆಲ್,  ತೊಕೊಟ್ಟು ಮೇಲ್ಸೇತುವೆ ಬಗ್ಗೆ  ಸಂಸದರ ಹೇಳಿಕೆ ಹಾಸ್ಯಸ್ಪದ: ಸುಶೀಲ್ ನೊರೊನ್ಹ

Spread the love

ಪಂಪ್‍ವೆಲ್,  ತೊಕೊಟ್ಟು ಮೇಲ್ಸೇತುವೆ ಬಗ್ಗೆ  ಸಂಸದರ ಹೇಳಿಕೆ ಹಾಸ್ಯಸ್ಪದ: ಸುಶೀಲ್ ನೊರೊನ್ಹ

ಸಂಸದ ನಳಿನ್‍ಕುಮಾರ್ ಕಟೀಲ್‍ರವರು ಪಂಪ್‍ವೆಲ್ ಫೈ ಓವರ್ ಹಾಗೂ ತೊಕೊಟ್ಟು ಮೇಲ್ಸೇತುವೆ ಬಗ್ಗೆ ನೀಡಿರುವ ಹೇಳಿಕೆಯು ಹಾಸ್ಯಸ್ಪದವಾಗಿದು,್ದ ಕುಣಿಯಲಿಕ್ಕೆ ಅರಿಯದವ ಜಾಗ ಓರೆ ಇದೆ ಎಂದು ಹಿರಿಯರ ಗಾದೆಗೆ ಸರಿಯಾಗಿದೆ. ಕಳೆದ ಒಂಭತ್ತು ವರುಷಗಳಿಂದ ಕೆಲಸ ಸಂಪೂರ್ಣಗೊಳಿಸಲು ವಿಫಲಗೊಂಡಿದ್ದು ಇದೀಗ ಭೂಮಿ ಒತ್ತುವರಿ, ಮಹಾವೀರ ವೃತ್ತ ಸ್ಥಳಾಂತರ ಬಗ್ಗೆ ಪುಕ್ಕಟೆ ಕಾರಣ ಕೊಡುವುದು ಎಪ್ಷು ಸಮಂಜಸ? ವರುಷಗಟ್ಟಲೆ ನಿಧಾನಗತಿ ಕಾಮಗಾರಿ, ವರುಷಗಟ್ಟಲೆ ಸಂಪೂರ್ಣ ಕೆಲಸ ನಿಂತಿದ್ದು ಇದಕ್ಕೆ ಯಾರು ಹೊಣೆ? ಇದೀಗ ಸಾರ್ವಜನಿಕರು ಅಕ್ರೋಶಗೊಂಡಿದ್ದಾರೆಂದು ತಿಳಿದು ಕಾಮಗಾರಿ ಅಂತಿಮ ಹಂತ ತಲುಪಿದೆ ಎಂದು ಸುಳ್ಳು ಹೇಳಿಕೆ ನೀಡಿ ಪ್ರಭಾರ ಗಿಟ್ಟಿಸಿಕೊಳ್ಳುವುದಕ್ಕಿಂತ ತನ್ನ ಜವಾಬ್ದಾರಿಯನ್ನು ನಿಭಾಯಿಸಿಲು ಅಸಾದ್ಯವಾಯಿತು ಎಂದು ಪಶ್ಚಾತ್ತಾಪ ಪಟ್ಟರೆ ಸೂಕ್ತ ಎಂದು ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.


Spread the love