ಪಜೀರು ಬಾಲಕಿ ಫಿಯೋನಾ ಸ್ವೀಡಲ್ ಕುಟ್ಹಿನೊ ನಾಪತ್ತೆ

ಪಜೀರು ಬಾಲಕಿ ಫಿಯೋನಾ ಸ್ವೀಡಲ್ ಕುಟ್ಹಿನೊ ನಾಪತ್ತೆ

ಮಂಗಳೂರು : ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಕಂಬ್ಲಪದವು, ಪಜೀರು ಗ್ರಾಮದ ನಿವಾಸಿಯಾದ ಫಿಯೋನಾ ಸ್ವೀಡಲ್ ಕುಟ್ಹಿನೊ(16) ಎಂಬ ಬಾಲಕಿ ತನ್ನ ಮನೆಯಿಂದ ಅಕ್ಟೋಬರ್ 8 ರಂದು ತನ್ನ ಅಣ್ಣನೊಂದಿಗೆ ಮಂಗಳೂರಿಗೆ ಹೋಗಿ ಬರುವುದಾಗಿ ಹೋದವರು ಕಾಣೆಯಾಗಿದ್ದಾರೆ.

ಕಾಣೆಯಾದ ಯುವತಿಯ ಚಹರೆ ಇಂತಿವೆ:- ಹೆಸರು- ಫಿಯೋನಾ ಸ್ವೀಡಲ್ ಕುಟಿನೊ, ಪ್ರಾಯ-16 ವರ್ಷ,ತಂದೆ ಫ್ರಾನ್ಸಿಸ್ ಕುಟಿನೊ, ಎತ್ತರ-4 ಅಡಿ 5 ಇಂಚು, ಗೋಧಿ ಮೈಬಣ್ಣ, ದುಂಡು ಮುಖ ಸಾಧಾರಣ ಮೈಕಟ್ಟು, ಮಾತಾನಾಡುವ ಭಾಷೆ-ಕನ್ನಡ, ತುಳು, ಕೊಂಕಣಿ, ಇಂಗ್ಲೀಷ್.

ಕಾಣೆಯಾದ ಬಾಲಕಿ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಪೊಲೀಸ್ ಆಯುಕ್ತರು ಮಂಗಳೂರು, ಕೊಣಾಜೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 0824-2220536, 9480802350, 0824-2220800 ಇವರನ್ನು ಸಂಪರ್ಕಿಸಲು ಠಾಣಾಧಿಕಾರಿ ಕೊಣಾಜೆ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.