ಪಡೀಲ್ ಬಳಿ ಅಪಘಾತ: ಯುವ ಛಾಯಾಗ್ರಾಹಕ ಮೃತ್ಯು

Spread the love

ಪಡೀಲ್ ಬಳಿ ಅಪಘಾತ: ಯುವ ಛಾಯಾಗ್ರಾಹಕ ಮೃತ್ಯು

ಮಂಗಳೂರು: ನಗರದ ಹೊರವಲಯ ಪಡೀಲ್ ಬಳಿ ಬುಧವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವ ಛಾಯಾಗ್ರಾಹಕ ಮೃತಪಟ್ಟಿದ್ದಾರೆ.

ಮೂಲತಃ ಚಿಕ್ಕಮಗಳೂರು ನಿವಾಸಿಯಾಗಿದ್ದು, ಪ್ರಸ್ತುತ ಯೆಯ್ಯಡಿ ನಿವಾಸಿ ಗಣೇಶ್ (30) ಮೃತ ಛಾಯಾಗ್ರಾಹಕ.

ಸ್ನೇಹಿತ ವೀಡಿಯೊಗ್ರಾಫರ್ ಸಂದೇಶ್ ಚಲಾಯಿಸುತ್ತಿದ್ದ ಸ್ಕೂಟರ್‌ನಲ್ಲಿ ಗಣೇಶ್ ಹಿಂಬದಿ ಸವಾರರಾಗಿದ್ದರು. ಪಡೀಲ್ ಬಳಿ ಹಿಂಬದಿಯಿಂದ ಕಂಟೈನರ್ ಲಾರಿ ಓವರ್‌ಟೇಕ್ ಮಾಡಿಕೊಂಡು ಬಂದಿದೆ. ಕಂಟೈನರ್ ಹಿಂಭಾಗ ಸ್ಕೂಟರ್‌ಗೆ ತಾಗಿ ನಿಯಂತ್ರಣ ಕಳೆದುಕೊಂಡು ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಸಂದೇಶ್ ಎದ್ದು ನೋಡಿದಾಗ ಗಣೇಶ್ ತಲೆಗೆ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ವೈದ್ಯರು ಪರೀಕ್ಷಿಸಿದಾಗ ಆಸ್ಪತ್ರೆಗೆ ಬರುವ ಮುನ್ನವೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love