ಪಡುಬಿದ್ರಿ ಘಟನೆ ಕುರಿತು ಸೂಕ್ತ ಕ್ರಮಕ್ಕೆ ಪಿಎಫ್ಐ ಆಗ್ರಹ

Spread the love

ಪಡುಬಿದ್ರಿ ಘಟನೆ ಕುರಿತು ಸೂಕ್ತ ಕ್ರಮಕ್ಕೆ ಪಿಎಫ್ ಐ ಆಗ್ರಹ
ಉಡುಪಿ: ಪಡುಬಿದ್ರಿಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವ ಸಂಘಪರಿವಾರದ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಬಜರಂಗದಳ ಹಾಗೂ ಹಿಂದೂಪರ ಸಂಘಟನೆ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪಡುಬಿದ್ರಿ ವಲಯ ಆಗ್ರಹಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಪಿಎಫ್ ಐ ಪಡುಬಿದ್ರಿ ವಲಯ ವಿಭಾಗೀಯ ಅಧ್ಯಕ್ಷ ಹಮೀದ್ ಉಚ್ಚಿಲ ಸುಖಾಂತ್ಯಗೊಂಡ ಮುದರಂಗಡಿ ಹಲ್ಲೆ ಪ್ರಕರಣದ ವಿಚಾರದಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿರುವ ಸಂಘಪರಿವಾರದ ಕಾರ್ಯಕರ್ತರು ಮಸೀದಿಗೆ ಕಲ್ಲು ಎಸೆದು, ಎಲ್ಲೂರಿನ ಮುಸ್ಲಿಂ ಯುವಕನಿಗೆ ಹಲ್ಲೆ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಿ ಶಾಂತಿ ಕದಡುವ ಸಂಘಟನೆಗೆ ಕಡಿವಾಣ ಹಾಕಲು ಪೋಲಿಸ್ ಇಲಾಖೆಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.


Spread the love