ಪಡುಬಿದ್ರೆ ಕಡಲ ತೀರಕ್ಕೆ ‘ಬ್ಲೂ ಫ್ಲ್ಯಾಗ್’ ಅಂತರಾಷ್ಟ್ರೀಯ ಮಾನ್ಯತೆ

Spread the love

ಉಡುಪಿ ಜಿಲ್ಲೆಯ ಪಡುಬಿದ್ರೆ ಸೇರಿ ಎಂಟು ಕಡಲ ತೀರಗಳಿಗೆ ‘ಬ್ಲೂ ಫ್ಲ್ಯಾಗ್’ ಅಂತರಾಷ್ಟ್ರೀಯ ಮಾನ್ಯತೆ

ಉಡುಪಿ: ಜಿಲ್ಲೆಯ ಪಡುಬಿದ್ರೆ ಸೇರಿದಂತೆ ಭಾರತದ ಎಂಟು ಕಡಲ ತೀರಗಳಿಗೆ ಅಧಿಕೃತವಾಗಿ “ಬ್ಲೂ ಫ್ಲ್ಯಾಗ್” ಅಂತರರಾಷ್ಟ್ರೀಯ ಮಾನ್ಯತೆ ಲಭಿಸಿದೆ.

ಗುಜರಾತ್ ನ ಶಿವರಾಜಪುರ, ದಿಯು ಮತ್ತು ದಾಮನ್ ನ ಘೋಗ್ಲಾ, ಕೇರಳದ ಕಪ್ಪದ್, ಕರ್ನಾಟಕದ ಕಾಸರ್ಕೋಡ್ ಮತ್ತು ಪಡುಬಿದ್ರೆ,  ಆಂದ್ರ ಪ್ರದೇಶದ ರುಶಿಕೊಂಡ,   ಒಡಿಶಾದ ಗೋಲ್ಡನ್ ಬೀಚ್, ಅಂಡಮಾನ್ ಮತ್ತು ನಿಕೋಬಾರ್ ನ ರಾಧಾನಗರ್ ಬೀಚ್ ಗಳು ಈ ಅಂತರ ರಾಷ್ಟ್ರೀಯ ಮಾನ್ಯತೆ ಪಡೆದಿವೆ

ಪರಿಸರ ತಜ್ಞರು, ವಿಜ್ಞಾನಿಗಳನ್ನೊಳಗೊಂಡ ರಾಷ್ಟ್ರೀಯ ಸ್ವತಂತ್ರ ತಂಡವು ಶಿಫಾರಸ್ಸುಗೊಂಡಿರುವ ಈ ಕಡಲ ತೀರಗಳನ್ನು ಪರಿಶೀಲನೆ ನಡೆಸಿದ್ದು, ದೇಶದ ಎಂಟು ಕಡಲ ತಡಿಗಳು ಮಾನ್ಯತೆಗೆ ಶಿಫಾರಸ್ಸುಗೊಂಡಿದ್ದವು.

ಬ್ಲೂ ಫ್ಲ್ಯಾಗ್ ಸರ್ಟಿಫಿಕೇಷನ್ ಎಂದರೇನು? ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದ ಬೀಚ್ ಗಳನ್ನು ವಿಶ್ವದ ಅತಿ ಸ್ವಚ್ಛ ಕಡಲ ತಡಿಗಳೆಂದು ಪರಿಗಣಿಸಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದ, ಡೆನ್ಮಾರ್ಕ್ ನಲ್ಲಿರುವ “ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಷನ್ ” ಸಂಸ್ಥೆಯು ಪರಿಸರ ಶಿಕ್ಷಣ ಮತ್ತು ಮಾಹಿತಿ, ನೀರಿನ ಗುಣಮಟ್ಟ, ಪರಿಸರ ನಿರ್ವಹಣೆ ಮತ್ತು ಸಂರಕ್ಷಣೆ, ಭದ್ರತೆ ಹಾಗೂ ಸೇವೆ ಎಂಬ ಪ್ರಮುಖ ನಾಲ್ಕು ಭಾಗಗಳಲ್ಲಿ 33 ಮಾನದಂಡಗಳನ್ನಿಟ್ಟುಕೊಂಡು ಈ ಮಾನ್ಯತೆಯನ್ನು ನೀಡುತ್ತದೆ.


Spread the love