ಪಡುಬೆಳ್ಳೆಯಲ್ಲಿ ಸೈನಡ್ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

Spread the love

ಪಡುಬೆಳ್ಳೆಯಲ್ಲಿ ಸೈನಡ್ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಉಡುಪಿ: ಸೈನಡ್ ಸೇವೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ತಾಲೂಕಿನ ಶಿರ್ವ ಪೋಲಿಸ್ ಠಾಣಾ ವ್ಯಾಪ್ತಿಯ ಪಡುಬೆಳ್ಳೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಮೃತರನ್ನು ಪಡುಬೆಳ್ಳೆಯ ನಿವಾಸಿ ಶಂಕರ ಆಚಾರ್ಯ (50), ಅವರ ಪತ್ನಿ ನಿರ್ಮಲಾ ಆಚಾರ್ಯ (44), ಹಾಗೂ ಪುತ್ರಿಯರಾದ ಶ್ರತಿ (23) ಹಾಗೂ ಶ್ರೇಯಾ (22) ಎಂದು ಗುರುತಿಸಲಾಗಿದೆ. ಮೃತ ಶಂಕರ ಆಚಾರ್ಯ ಪಡುಬೆಳ್ಳೆಯಲ್ಲಿ ಶ್ರೇಯಾ ಜುವೆಲರಿ ಅಂಗಡಿಯನ್ನು ನಡೆಸುತ್ತಿದ್ದರು.

ಮಾಹಿತಿಗಳ ಪ್ರಕಾರ ಬುಧವಾರ ಶಂಕರ ಆಚಾರ್ಯ ತಮ್ಮ ಜುವೆಲರಿ ಅಂಗಡಿಯನ್ನು ಮುಚ್ಚಿ ಮನೆಗೆ ಬಂದು ಕುಟುಂಬ ಸಮೇತವಾಗಿ ಸೈನಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ತಿಳಿದು ಬಂದಿದೆ. ಬೆಳಿಗ್ಗೆಯಾದರೂ ಮನೆಮಂದಿ ಬಾಗಿಲು ತೆರೆಯದೆ ಇದ್ದಾಗ ಸಂಶಯಗೊಂಡ ಸ್ಥಳೀಯರು ಹಾಗೂ ಬಂಧುಗಳು ಬಾಗಿಲು ಒಡೆದು ನೋಡುವಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಆರ್ಥಿಕ ಸಮಸ್ಯೆ ಕಾರಣ ಎಂದು ಹೇಳಲಾಗುತ್ತಿದೆ.

ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


Spread the love