ಪಣಂಬೂರು ಬಳಿ ಬೈಕ್ -ಟಿಪ್ಪರ್ ನಡುವೆ ಅಪಘಾತ – ಮೂವರು ಯುವಕರಿಗೆ ಗಂಭೀರ ಗಾಯ

Spread the love

ಪಣಂಬೂರು ಬಳಿ ಬೈಕ್ ಟಿಪ್ಪರ್ ನಡುವೆ ಅಪಘಾತ – ಮೂವರು ಯುವಕರಿಗೆ ಗಂಭೀರ ಗಾಯ

ಮಂಗಳೂರು:  ಬೈಕ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಅಫಘಾತದಲ್ಲಿ ಮೂವರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.

ಗಾಯಗೊಂಡ ಯುವಕರನ್ನು ಗಂಗಾಧರ(22), ರೋಶನ್(21), ಮತ್ತು ಧನರಾಜ್ (24) ಎಂದು ಗುರುತಿಸಲಾಗಿದೆ. ಮೂವರು ಸುರತ್ಕಲ್ ಮೀನಕಳಿ ನಿವಾಸಿಗಳಾಗಿದ್ದಾರೆ.

ಶುಕ್ರವಾರ ಮೂವರು ಯುವಕರು ಕೆ ಕೆ ಗೇಟ್ ನಿಂದ ಮೀನಕಳಿಯ ಕಡೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದು, ಪಣಂಬೂರು ಬಳಿ ಟಿಪ್ಪರ್ ಒಂದು ಅವರ ಬೈಕಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಫಘಾತದ ರಭಸಕ್ಕೆ ಮೂವರು ಕೂಡ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರ ವಾಗಿದೆ ಎನ್ನಲಾಗಿದೆ.

 ಪಣಂಬೂರು ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love