ಪತ್ರಕರ್ತರಿಗೆ ಇಸಂ ಬೇಡ ಜರ್ನಲಿಸಂ ಇದ್ದರೆ ಸಾಕು – ಶ್ರೀರಾಜ್ ಗುಡಿ

Spread the love

ಪತ್ರಕರ್ತರಿಗೆ ಇಸಂ ಬೇಡ ಜರ್ನಲಿಸಂ ಇದ್ದರೆ ಸಾಕು – ಶ್ರೀರಾಜ್ ಗುಡಿ

ಉಡುಪಿ: ಭಾರತದ ಮೀಡಿಯಾಕ್ಕೆ ಬೇರೆ ದೇಶದ ಮೀಡಿಯಾ ಮಾಡೆಲ್ ಅಲ್ಲ. ಭಾರತಕ್ಕೆ ಭಾರತವೇ ಮಾಡೆಲ್ ಅಂತ ಸ್ಕೂಲ್ ಆಫ್ ಕಮ್ಯೂನಿಕೇಶನ್ ಮಣಿಪಾಲ್ ಇದರ ಸಹಾಯಕ ಪ್ರಾಧ್ಯಾಪಕ ಶ್ರೀರಾಜ್ ಗುಡಿ ಹೇಳಿದರು.

ಅವರು ಭಾನುವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಉಡುಪಿ ಸಹಯೋಗದಲ್ಲಿ ಜಗನ್ನಾಥ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

30 ಭಾಷೆಗಳಲ್ಲಿ ಮೀಡಿಯಾ ಗಟ್ಟಿಯಾಗಿರುವುದು ಭಾರತದಲ್ಲಿ ಮಾತ್ರ. ಹಾಗಾಗಿ ಭಾರತದ ಮಾಧ್ಯಮ ವಿಶ್ವಕ್ಕೆ ಮಾದರಿಯಾಗುವಂತದ್ದು. ಇಸಂ ಅನ್ನೋದೇ ಪತ್ರಿಕೋದ್ಯಮಕ್ಕೆ ಅಪಾಯಕಾರಿ. ಪತ್ರಿಕೋದ್ಯಮ ಕ್ಕೆ ಬರುವ ವಿದ್ಯಾರ್ಥಿಗಳಿಗೆ ಇಸಂ ಇದ್ದರೆ ಅದು ಜರ್ನಲಿಸಂ ಇರಲಿ ಅಂತ ಶ್ರೀರಾಜ್ ಗುಡಿ ಸಲಹೆ ನೀಡಿದರು.ಪತ್ರಿಕೆಗಳು, ಅದರಲ್ಲಿ ಪ್ರಕಟವಾಗುವ ವಿಚಾರಗಳು ವ್ಯಕ್ತಿ. ವ್ಯಕ್ತಿತ್ವವನ್ನು ಬದಲಿಸುತ್ತದೆ. ನಾನ್ನ ಜೀವನವನ್ನು ಪತ್ರಿಕೆಯಲ್ಲಿ ಬಂದ ಒಂದು ಲೇಖನ ಬದಲಾಯಿಸಿದೆ ಎಂದರು.

ಪತ್ರಿಕಾ ದಿನಾಚರಣೆಯ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪೂರಸ್ಕೃತ ಹಿರಿಯ ಪತ್ರಕರ್ತ ಅಲೆವೂರು ದಿನೇಶ್ ಕಿಣಿ, ಪತ್ರಿಕಾ ವಿತರಕ ನಜೀರ್ ಸಾಹೇಬ್ ಕಟಪಾಡಿಯವರನ್ನು ಗೌರವಿಸಲಾಯ್ತು. ವಿವಿಧ ಪತ್ರಿಕೆ ಮತ್ತು ಮಾಧ್ಯಮಗಳ ಪತ್ರಕರ್ತರ ಎಸ್ ಎಸ್ ಎಲ್ ಸಿ , ಪಿಯುಸಿ 7 ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯ್ತು.

ಉಡುಪಿ ಜಿಲ್ಲಾ ವಾರ್ತಾಧಿಕಾರಿ ರೋಹಿಣಿಯವರು ದಕ್ಷಿಣ ಕನ್ನಡ ಜಿಲ್ಲೆಗೆ ಪದೋನ್ನತಿ ಹೊಂದಿದ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ನೀಡಲಾಯಿತು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಅಧ್ಯಕ್ಷತೆ ವಹಿಸಿದ್ದರು. ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಇದರ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಕಾರ್ಯದರ್ಶಿ ದಿವಾಕರ್ ಭಂಡಾರಿ ಉಪಸ್ಥಿತರಿದ್ದರು. ಉಡುಪಿ ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ ವರ್ಕಾಡಿ ಸ್ವಾಗತಿಸಿದರು. ಪಲ್ಲವಿ ಸಂತೋಷ್ ನಿರೂಪಿದರು, ಹರೀಶ್ ಕಟಪಾಡಿ ವಂದಿಸಿದರು.


Spread the love