ಪತ್ರಕರ್ತರ ಮನೆಯಲ್ಲಿ ಕಳ್ಳತನ : ಪ್ರಕರಣ ಶೀಘ್ರ ಬೇಧಿಸಲಿ ಕೆಜೆಯು ಮನವಿ

Spread the love

ಪತ್ರಕರ್ತರ ಮನೆಯಲ್ಲಿ ಕಳ್ಳತನ : ಪ್ರಕರಣ ಶೀಘ್ರ ಬೇಧಿಸಲಿ ಕೆಜೆಯು ಮನವಿ

ಬಂಟ್ವಾಳ : ವಿಟ್ಲ, ಬೊಬ್ಬಕ್ಕೇರಿ ನಿವಾಸಿ, ಪತ್ರಕರ್ತ ರಮೇಶ್ ಕೆ. ಯಾನೆ ವಿಷ್ಣುಗುಪ್ತ ಪುಣಚ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಬಂಟ್ವಾಳ ಎಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ ಅವರಿಗೆ ಕಚೇರಿಯಲ್ಲಿ ಬುಧವಾರ ಮನವಿ ಸಲ್ಲಿಸಲಾಯಿತು.

ಕಳ್ಳತನ ಪ್ರಕರಣವನ್ನು ಭೇದಿಸಿ, ನೈಜ ಆರೋಪಿ ಗಳನ್ನು ಬಂಧಿಸಬೇಕು ಎಂದು ಸಂಘದ ಸದಸ್ಯರು ಆಗ್ರಹಿಸಿದರು.

ಬಳಿಕ ಬಂಟ್ವಾಳ ವೃತ್ತ ನಿರೀಕ್ಷಕರು ಟಿ.ಡಿ. ನಾಗರಾಜ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷ ಫಾರೂಕ್ ಬಂಟ್ವಾಳ, ಕಾರ್ಯದರ್ಶಿ ವಿ.ಟಿ.ಪ್ರಸಾದ್, ಉಪಾಧ್ಯಕ್ಷ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಕೋಶಾಧಿಕಾರಿ ವಿಶ್ವನಾಥ್ ಬಂಟ್ವಾಳ, ಸದಸ್ಯರಾದ ಲತೀಫ್ ನೇರಳಕಟ್ಟೆ, ಜ್ಯೋತಿ ಪ್ರಕಾಶ್ ಪುಣಚ, ಸತೀಶ್ ಕಾರ್ತಿಕ್ ಉಪಸ್ಥಿತರಿದ್ದರು.


Spread the love