ಪರವಾನಿಗೆ ಇಲ್ಲದೆ ಮದ್ಯ ಮಾರಾಟ – ಒರ್ವನ ಬಂಧನ

Spread the love

ಪರವಾನಿಗೆ ಇಲ್ಲದೆ ಮದ್ಯ ಮಾರಾಟ – ಒರ್ವನ ಬಂಧನ

ಬಂಟ್ವಾಳ: ಪರವಾನಿಗೆ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ಪೋಲಿಸರು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ: ಜುಲೈ 4ರಂದು ಬಂಟ್ವಾಳ ಪೋಲಿಸ್ ಅಧಿಕಾರಿ ಹರೀಶ್ ಅವರು ರೌಂಡ್ಸ ಕರ್ತವ್ಯದಲ್ಲಿರುವಾಗ ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಯೊಂದಿಗೆ ಇಲಾಖಾ ಜೀಪಿನಲ್ಲಿ ಬೆಳಿಗ್ಗೆ 9.30 ಗಂಟೆಯ ಸಮಯ ಬಡ್ಡಕಟ್ಟೆ ಎಂಬಲ್ಲಿಗೆ ಹೋದಾಗ ಮಾಹಿತಿ ಬಂದ ಚಹರೆಯನ್ನು ಹೋಲುವ ಒಬ್ಬ ವ್ಯಕ್ತಿಯು ಕೈಯಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ನಿಂತಿರುವುದು ಕಂಡು ಬಂದಿದ್ದು, ಜೀಪಿನಿಂದ ಇಳಿದು ಅವನ ಬಳಿ ಹೋಗಿ ಆತನನ್ನು ವಿಚಾರಿಸಿದಾಗ ಆತನ ಹೆಸರು ಗಣೇಶ (30) ತಂದೆ ಗುರುವ ವಾಸ ಮಧ್ವ ಮನೆ ಕಾವಳ ಪಡೂರು ಗ್ರಾಮ ಬಂಟ್ವಾಳ ಎಂದು ಹೇಳಿದ್ದು, ಆತನ ಕೈಯಲ್ಲಿ ಪ್ಲಾಸ್ಟಿಕ್ ಬ್ಯಾಗನಲ್ಲಿ ಏನಿದೆ ಎಂದು ಕೇಳಿದಾಗ ಮದ್ಯದ ಬಾಟ್ಲಿಗಳು ಇದೆ ಎಂದು, ನಾನು ಊರಿಗೆ ಕೊಂಡು ಹೋಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಾಗಿ ತಿಳಿಸಿದ್ದು, ಸದ್ರಿ ಪ್ಲಾಸ್ಟಿಕ್ ಚೀಲವನ್ನು ಪಡೆದು ನೋಡಲಾಗಿ 1. 180 ಎಮ್‌ಎಲ್‌ನ Prestige WHISKY ಎಂದು ಬರೆದಿರುವ ಮದ್ಯ ತುಂಬಿದ ಪ್ಲಾಸ್ಟಿಕ್‌ ಬಾಟ್ಲಿಗಳು ಒಟ್ಟು = 4 ಇದರ ಮುಚ್ಚಲದ ಮೇಲೆ ಕರ್ನಾಟಕ ಅಬಕಾರಿ ಕಮಿಷನರ್‌ ಎಂದು ಬರೆದಿರುವ ಸ್ಟಿಕರ್‌ ಹಾಕಿರುವುದು ಕಂಡು ಬಂದಿರುತ್ತದೆ, ಇದರ ಒಟ್ಟು ಮೌಲ್ಯ. 236/ ಆಗಿರುತ್ತದೆ

2. 330 ಎಮ್‌ಎಲ್‌ನ UB EXPORT STRONG ಎಂದು ಬರೆದಿರುವ ಮದ್ಯ ತುಂಬಿದ ಬಾಟ್ಲಿ ಗಳು ಒಟ್ಟು = 6, ಇದರ ಕಂಟದಲ್ಲಿ ಮುಚ್ಚಲ ಹಾಕಿ ಬಂದ್‌ ಮಾಡಿದ್ದು, ಮುಚ್ಚಲದ ಮೇಲೆ ಕರ್ನಾಟಕ ಅಬಕಾರಿ ಕಮಿಷನರ್‌ ಎಂದು ಬರೆದಿರುವ ಸ್ಟಿಕರ್‌ ಹಾಕಿರುವುದು ಕಂಡು ಬಂದಿರುತ್ತದೆ, ಇದರ ಒಟ್ಟು ಮೌಲ್ಯ 318 ಆಗಿರುತ್ತದೆ
3. 180 ಎಮ್‌ಎಲ್‌ನ ಬೆಂಗಳೂರು ಮಾಲ್‌ ವಿಸ್ಕಿ ಎಂದು ಬರೆದಿರುವ ಮದ್ಯ ತುಂಬಿದ ಟೆಟ್ರಿಪ್ಯಾಕ್‌ = 24 ಇದರ ಕಂಟದಲ್ಲಿ ಕರ್ನಾಟಕ ಅಬಕಾರಿ ಕಮಿಷನರ್‌ ಎಂದು ಬರೆದಿರುವ ಸ್ಟಿಕರ್‌ ಹಾಕಿರುವುದು ಕಂಡು ಬಂದಿರುತ್ತದೆ, ಇದರ ಒಟ್ಟು ಮೌಲ್ಯ 1152/ ಆಗಿರುತ್ತದೆ ಇವುಗಳ ಒಟ್ಟು ಮೌಲ್ಯ ರೂ. 1706 ಆಗಿರುತ್ತದೆ. ಒಟ್ಟು 7.02 ಲೀಟರ್‌ ಮದ್ಯ ಇರುವುದಾಗಿದೆ. ಯಾವುದೆ ಪರವಾನಿಗೆ ಇದೆಯೇ ಎಂದು ಕೇಳಿದಾಗ ಇರುವುದಿಲ್ಲವೆಂದು ತಿಳಿಸಿದ್ದು, ಈತನು ವೈನ್ ಶಾಪಗಳಿಂದ ಮದ್ಯ ತುಂಬಿದ ಬಾಟ್ಲಿಗಳನ್ನು ತಂದು ಯಾವುದೇ ಪರವಾನಿಗೆ ಇಲ್ಲದೆ ಗಿರಾಕಿಗಳಿಗೆ ಹೆಚ್ಚಿನ ಕ್ರಯಕ್ಕೆ ಮಾರಾಟ ಮಾಡಿ ಹಣ ಮಾಡುವುದು ಅಪರಾಧವಾಗಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ,
ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ ಕ್ರ : 349/2018 ಕಲಂ: 32,34, ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.


Spread the love