ಪರವಾನಿಗೆ ಇಲ್ಲದ ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನ ವಶಪಡಿಸಿಕೊಂಡ ಚುನಾವಣಾ ಆಯೋಗ

Spread the love

ಪರವಾನಿಗೆ ಇಲ್ಲದ ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನ ವಶಪಡಿಸಿಕೊಂಡ ಚುನಾವಣಾ ಆಯೋಗ

ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಅವರ ಸಾಧನೆಗಳ ಪ್ರಚಾರಕ್ಕಾಗಿ ತಯಾರಿಸಿದ ವಾಹವನ್ನು ಬುಧವಾರ ಬೆಳಿಗ್ಗೆ ಪರವಾನಿಗೆ ಪಡೆಯದೆ ಪ್ರಚಾರಕ್ಕೆ ಬಳಸಿದ್ದ ಆರೋಪದ ಮೇಲೆ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪ್ರೋಬೆಶನರಿ ಐಎಎಸ್ ಅಧಿಕಾರಿ ಪೂವಿತಾ ಅವರ ನೇತೃತ್ವದಲ್ಲಿ ಧಾಳಿ ನಡೆಸಿದ ಜಿಲ್ಲಾ ಚುನಾವಣಾ ಆಯೋಗದ ತಂಡ ಉಡುಪಿಯ ಸರ್ಕಿಟ್ ಹೌಸ್ ಬಳಿಯಲ್ಲಿ ಪ್ರಚಾರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಚುನಾವಣಾ ಆಯೋಗದ ಪರವಾನಿಗೆ ಪಡೆಯದೆ ವಾಹನವನ್ನು ಪ್ರಚಾರಕ್ಕೆ ಬಳಸಲಾಗಿತ್ತು ಎಂದು ಆರೋಪಿಸಲಾಗಿದ್ದು, ಕೈ ಚಿಹ್ನೆ, ಪ್ರಮೋದ್ ಭಾವಚಿತ್ರ ಈ ವಾಹನದ ಮೇಲೆ ಇದ್ದ ಕಾರಣ ವಾಹವನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಧ್ವರಾಜ್ ಅವರ ಚುನಾವಣಾ ಪ್ರಚಾರ ವಾಹನದಲ್ಲಿ ಪ್ರಮೋದ್ ಮಧ್ವರಾಜ್ ಅವರ ಹೆಸರು ಹಾಗೂ ಭಾವಚಿತ್ರ ಬಿಟ್ರೆ ಬೇರೆ ಯಾವುದೇ ಕಾಂಗ್ರೆಸ್ ನಾಯಕರ ಫೋಟೋ, ಕೈಚಿಹ್ನೆ  ಕಂಡುಬಂದಿರಲಿಲ್ಲ ಇದರಿಂದ ವಾಹನ ಕೂಡ ಇತ್ತೀಚೆಗಷ್ಟೇ ವಿವಾದಕ್ಕೂ ಕಾರಣವಾಗಿತ್ತು. ಬಳಿಕ ಎಚ್ಚೆತ್ತುಕೊಂಡ ಪ್ರಮೋದ್ ಅಭಿಮಾನಿ ಬಳಗ ಹಾಗೂ ಪ್ರಮೋದ್ ಅವರು ಪ್ರಚಾರ ವಾಹನದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಕೈ ಪಕ್ಷದ ಚಿಹ್ನೆಯನ್ನು ಹಾಕಿಸಿಕೊಂಡಿದ್ದರು.


Spread the love